ಹಳಿ ದಾಟುತ್ತಿದ್ದ ಆನೆಗೆ ರೈಲು ಡಿಕ್ಕಿ | ಕಾಲು ಕಳೆದುಕೊಂಡು ತೆವಳುತ್ತಾ ಸಾಗಿ ಪ್ರಾಣಬಿಟ್ಟ ಆನೆ

ಅಸ್ಸಾಂ: ಹಳಿ ದಾಟುತ್ತಿದ್ದ ಆನೆಯೊಂದಕ್ಕೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಜಾಗಿರೋಡ್ ರೈಲು ನಿಲ್ದಾಣದ ಸಮೀಪದಲ್ಲಿ ನಡೆದಿದೆ.

ಆನೆಗೆ ರೈಲು ಡಿಕ್ಕಿಯಾದ ಪರಿಣಾಮ 2 ಕಾಲು ಕಳೆದುಕೊಂಡ ಆನೆ ತೆವಳುತ್ತಾ ಸಾಗಿ ಪ್ರಾಣಬಿಟ್ಟಿದೆ.

ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ವೇಗವಾಗಿ ತೆರಳುತ್ತಿದ್ದ ವೇಳೆ ಎರಡು ಆನೆಗಳು ಹಳಿ ದಾಟುತ್ತಿತ್ತು. ಒಂದು ಆನೆ ಕೂದಲೆಳೆಯುವ ಅಂತರದಲ್ಲಿ ಹಳಿ ದಾಟಿದರೆ ಅದರ ಹಿಂದಿದ್ದ ಈ ಆನೆಗೆ ರೈಲು ಡಿಕ್ಕಿಯಾಗಿದೆ. ರೈಲು ಡಿಕ್ಕಿಯಾದ ಪರಿಣಾಮ ಆನೆ ಗಂಭೀರವಾಗಿ ಗಾಯಗೊಂಡಿದೆ. ಎರಡೂ ಕಾಲುಗಳನ್ನು ಕಳೆದುಕೊಂಡಿದೆ. ತೀವ್ರ ನೋವು, ರಕ್ತ ಸ್ರಾವದ ನಡುವೆ ಹಳಿಯ ನಡುವೆ ತೆವಳುತ್ತಾ ಸಾಗಿದ ಆನೆ ಕೊನೆಗೆ ಪ್ರಾಣ ಬಿಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಂತವರ ಕಣ್ಣಲ್ಲಿ ಕಣ್ಣೀರು ಜಿನುಗಿಸುತ್ತೆ.































 
 

ಈ ವಿಡಿಯೋ ಹಂಚಿಕೊಂಡು ಸಂಬಂಧ ಪಟ್ಟ ಅಧಿಕಾರಿಗಳು ವನ್ಯ ಪ್ರಾಣಿಗಳ ಪ್ರಾಣ ಉಳಿಸಲು ಏನಾದರು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಕೆಕೆಆರ್ ಸ್ಟಾರ್ ಕ್ರಿಕೆಟಿಗ ವರುಣ್ ಚಕ್ರವರ್ಥಿ ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top