ಪುತ್ತೂರು: ಕಬಕ ಪರಿಸರದಲ್ಲಿ ಚಿರತೆ ಪತ್ತೆಯಾಗಿದೆ ಎಂಬ ವದಂತಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಂದೇಶಗಳು ಹರಿದಾಡುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.
ಕಬಕ ಪರಿಸರದ ಗ್ರಾಮಕರಣಿಕರ ಕಚೇರಿ ಕುಳ ಆಫೀಸ್ ನ ಬಳಿ ಬುಧವಾರ ರಾತ್ರಿ ಬಹಳ ದೊಡ್ಡಗಾತ್ರದ ಚಿರತೆ ಪ್ರತ್ಯಕ್ಷ ವಾಗಿದೆ. ಒಂದು ನಾಯಿಯನ್ನು ಕೊಂಡು ಹೋಗಿದ್ದು ಕೆಲದಿನಗಳಿಂದ ಈ ಪರಿಸರದಿಂದ ಕಾಣೆಯಾಗುತ್ತಿದ್ದ ನಾಯಿಗಳ ಬಗ್ಗೆ ಇದ್ದ ಅನುಮಾನಗಳಿಗೆ ಉತ್ತರ ಸಿಕ್ಕಿದೆ. ಕಣ್ಣಾರೇ ನೋಡಿದವರ ಪ್ರಕಾರ ಬಹಳ ದೊಡ್ಡ ಗಾತ್ರದ ಚಿರತೆ ಇದಾಗಿದೆ. ನಿನ್ನೆ ಮಳೆ ಇಲ್ಲದ ಕಾರಣ ಚಿರತೆಯ ಹೆಜ್ಜೆಗಳೂ ಸ್ಪಷ್ಟ ಸಾಕ್ಷಿಯಾಗಿದೆ. ಸಾರ್ವಜನಿಕರು ಜಾಗರೂಕರಾಗಿರಬೇಕು ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.