ಗಾಯಕ, ವೈದ್ಯ ಡಾ.ಸತೀಶ್ ಪೂಜಾರಿ ನಿಧನ

ಉಡುಪಿ : ಕೋಟದ ಶ್ರೀ ಮಾತಾ ಆಸ್ಪತ್ರೆಯ ಮಾಲಕ ಡಾ.ಸತೀಶ್ ಪೂಜಾರಿ (54) ಹೃದಯಾಘಾತದಿಂದ ಕೋಟತಟ್ಟು ಮಣೂರಿನ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನರಾದರು.

ಕುಂದಾಪುರದ ಶ್ರೀ ಮಾತಾ ಆಸ್ಪತ್ರೆ ಮಾಲೀಕರಾಗಿದ್ದ ಇವರು ಕಲಾವಿದರೂ ಆಗಿದ್ದರು ಹಾಗೂ ಮನಸ್ಮಿತಾ ಫೌಂಡೇಷನ್ ಹಾಗೂ ಇನ್ನಿತರ ಸಂಸ್ಥೆಗಳಲ್ಲೂ ಇದ್ದರು. ಇಎನ್‌ಟಿ ತಜ್ಞರಾಗಿದ್ದ ಡಾ. ಸತೀಶ್ ಅತ್ಯುತ್ತಮ ಗಾಯಕರಾಗಿದ್ದು, ಅನೇಕ ಸಂಗೀತ ವೀಡಿಯೊಗಳನ್ನು, ಆಲ್ಬಂಗಳನ್ನು ಹೊರತಂದಿದ್ದರು. ಸಂಗೀತ ರಸಮಂಜರಿಗಳಲ್ಲಿ ಹಾಡುತ್ತಿದ್ದರು.

ಗಾಯಕಿ ಎಸ್‌. ಜಾನಕಿಯವರ ಅಭಿಮಾನಿಯಾಗಿದ್ದ ಡಾ.ಸತೀಶ್ ಪೂಜಾರಿ ವರ್ಷಂಪ್ರತಿ ಕೋಟೇಶ್ವರದಲ್ಲಿ ಡಾ.ಎಸ್‌.ಜಾನಕಿ ಪುರಸ್ಕಾರ ಸಮಾರಂಭ ಆಯೋಜಿಸುತ್ತಿದ್ದರು.





























 
 

ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top