ಎಲ್ ಕೆಜಿ, ಯುಕೆಜಿ, 1ನೇ ತರಗತಿಗೆ ದಾಖಲಿಸಲು ಗರಿಷ್ಠ ವಯೋಮಿತಿ ನಿಗದಿ | ಆದೇಶ ಹೊರಡಿಸಿದ ಸರಕಾರ

ಬೆಂಗಳೂರು: ಮಕ್ಕಳನ್ನು ಎಲ್.ಕೆ.ಜಿ, ಯುಕೆಜಿ ಹಾಗೂ 1ನೇ ತರಗತಿಗೆ ದಾಖಲಿಸಲು ಈಗಾಗಲೇ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಿದ ರಾಜ್ಯ ಸರಕಾರ ಇದೀಗ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿದೆ.

ಮಕ್ಕಳ ಎಲ್.ಕೆ.ಜಿ ಪ್ರವೇಶಾತಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಈಗ ಗರಿಷ್ಠ ವಯೋಮಿತಿ 6 ವರ್ಷ ನಿಗದಿಪಡಿಸಲಾಗಿದೆ. ಯುಕೆಜಿ ಪ್ರವೇಶಾತಿಗೆ 4-5 ವರ್ಷ ಕನಿಷ್ಠ ವಯೋಮಿತಿಯಾದರೆ, ಗರಿಷ್ಠ ವಯೋಮಿತಿ 7 ವರ್ಷ ಆಗಿದೆ. ಒಂದನೇ ತರಗತಿ ಪ್ರವೇಶಾತಿಗೆ ಕನಿಷ್ಠ ವಯೋಮಿತಿ 6 ವರ್ಷ ಇದ್ದರೆ, ಗರಿಷ್ಠ ವಯೋಮಿತಿ 8 ವರ್ಷ ನಿಗದಿಪಡಿಸಲಾಗಿದೆ.

ಅರ್ಧದಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.































 
 

ಈ ಹೊಸ ಆದೇಶ ಎಲ್.ಕೆ.ಜಿ ಗೆ 2023-24, ಯುಕೆಜಿಗೆ 2024-25 ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ 2025-26ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜೂ.1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರುವ ಮಗುವನ್ನು ಮಾತ್ರ 1ನೇ ತರಗತಿಗೆ ದಾಖಲಿಸಿಕೊಳ್ಳುವಂತೆ ಕಳೆದ ವರ್ಷವೇ ಆದೇಶ ಹೊರಡಿಸಿತ್ತು. ಆದ್ದರಿಂದ ಈ ಶೈಕ್ಷಣಿಕ ಸಾಲಿನಿಂದಲೇ ಎಲ್.ಕೆ.ಜಿ ತರಗತಿಗೆ ದಾಖಲಿಸಿಕೊಳ್ಳಲು ಜೂ.1ನೇ ತಾರೀಕಿಗೆ ಅನ್ವಯವಾಗುವಂತೆ 4 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಒಂದನೇ ತರಗತಿಗೆ ಪ್ರವೇಶ ನೀಡಬೇಕಾದರೆ ಜೂನ್ ಒಂದನೇ ತಾರೀಖಿಗೆ ಅನ್ವಯವಾಗುವಂತೆ 6 ವರ್ಷ ತುಂಬಿರಲೇಬೇಕು ಎಂದು ಕಳೆದ ವರ್ಷ ಜುಲೈನಲ್ಲಿ ಆದೇಶ ಹೊರಡಿಸಿ ಈ ಆದೇಶವನ್ನು 2023-24ನೇ ಸಾಲಿನಿಂದಲೇ ಜಾರಿಗೆ ತರಬೇಕೆಂದು ಸೂಚಿಸಲಾಗಿತ್ತು. ಆದರೆ ಪೋಷಕರು ಮತ್ತು ಶಾಲೆಗಳ ಆಡಳಿತ ಮಂಡಳಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ 2025-26ನೇ ಸಾಲಿನ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿತ್ತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top