ಇಂದು ರೋಟರಿ ಯುವ ಕ್ಲಬ್‍ ನ ದಶಮಾನೋತ್ಸವ | ಪದಗ್ರಹಣ ಸ್ವೀಕರಿಸಲಿರುವ ನೂತನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ವಚನಾ ಜಯರಾಂ, ಕೋಶಾಧಿಕಾರಿ ಅಭಿಷ್‍ ಕೆ.

ಪುತ್ತೂರು:  ರೋಟರಿ ಕ್ಲಬ್ ಯುವ ಸ್ಥಾಪನೆಯಾಗಿ ಹತ್ತನೇ ವರ್ಷದ ಸಂಭ್ರಮದಲ್ಲಿದ್ದು, 2024-25 ಅವಧಿಯ ಅಧ್ಯಕ್ಷೆಯಾಗಿ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ವಚನ ಜಯರಾಂ, ಕೋಶಾಧಿಕಾರಿಯಾಗಿ ಅಭಿಷ್ ಕೆ ಇಂದು ಪದಗ್ರಹಣಗೊಳ್ಳಲಿದ್ದಾರೆ.

ಪಿಡಿಜಿ ಡಾ. ಗೌರಿ ಹಡಿಗಾಲ್ ಪದಗ್ರಹಣ ನೆರವೇರಿಸಲಿದ್ದಾರೆ.

ಕ್ಲಬ್ ನ ಕ್ಲಬ್ ಸರ್ವಿಸ್ ಡೈರೆಕ್ಟರ್ ಆಗಿ ಕುಸುಮ್ ರಾಜ್, ವೊಕೇಷ ನಲ್ ಸರ್ವಿಸ್ ಡೈರೆಕ್ಟರ್ ಆಗಿ ಗೌರವ ಭಾರದ್ವಾಜ್, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಆಗಿ ನಿಹಾಲ್ ಶೆಟ್ಟಿ, ಇಂಟರ‍ ನ್ಯಾಷನಲ್ ಸರ್ವಿಸ್ ಡೈರೆಕ್ಟರ್ ಆಗಿ ವಿನೀತ್ ಶೆಣೈ, ಯುತ್ ಸರ್ವಿಸ್ ಡೈರೆಕ್ಟರ್ ರಾಗಿ ಸುದರ್ಶನ್ ರೈ ಆಯ್ಕೆಯಾಗಿದ್ದಾರೆ. ಬುಲೆಟಿನ್ ಎಡಿಟರ್ ಆಗಿ ಡಾ.ದೀಪಕ್ ಕೆ ಬಿ ಕ್ಲಬ್ ನ, ಅಸಿಸ್ಟೆಂಟ್ ಗವರ್ನರ್ ಆಗಿ ಡಾ. ಹರ್ಷಕುಮಾರ್ ರೈ, ಜೋನಲ್ ಲಿಫ್ಟಿನೆಂಟ್ ಆಗಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಕಾರ್ಯ ನಿರ್ವಹಿಸಲಿದ್ದಾರೆ. ಮೆಂಬರ್ ಶಿಪ್ ಚೇರ್ ಮೆನ್ ಡಾ.ಯದುರಾಜ್, ಟಿಆರ್‍ ಎಫ್ ಚೇರ್ ಮೆನ್  ಸ್ವಸ್ತಿಕ ಶೆಟ್ಟಿ, ಪಬ್ಲಿಕ್ ಇಮೇಜ್ ಚೇರ್ ಮೆನ್ ಸುದರ್ಶನ್ ಹಾರಕರೆ , ಸಿಎಲ್‍ ಸಿಸಿ ವಿನ್ಸ್  ಚೇರ್ ಮೆನ್ ಕನಿಷ್ಕ,  ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ಚೇರ್ ಮೆನ್ ರತ್ನಾಕರ ರೈ , ಪೋಲಿಯೋ ಪ್ಲಸ್ ಚೇರ್ ಮೆನ್ ಸೋನ ಪ್ರದೀಪ್, ಕ್ಲಬ್ ಲರ್ನಿಂಗ್ ಫೇಸಿಲಿಟೇಟರ್ ಉಮೇಶ್ ನಾಯಕ್ ಹಾಗೂ ಸರ್ಜೆಂಟ್ ಎಟ್ ಆರ್ಮ್ ಆಗಿ ತ್ರಿವೇಣಿ ಗಣೇಶ್ ಆಯ್ಕೆಯಾಗಿರುತ್ತಾರೆ .







































 
 

ಸಂಧ್ಯಾ ಸುರಕ್ಷಾ ಆರೋಗ್ಯ ಮಧ್ಯಪಾನ ಡ್ರಗ್ ಡಿ ಎಡಿಕ್ಷನ್ ಕಾರ್ಯಕ್ರಮಗಳು, ಸರ್ವೈಕಲ್ ಕ್ಯಾನ್ಸರ್ ಬಗ್ಗೆ ಯೋಜನೆಗಳು, ಕುಡಿಯುವ ನೀರಿನ ಕೊಡುಗೆಗಳು, ಅಂಗನವಾಡಿ ಶಾಲೆಗೆ ಕೊಡುಗೆಗಳು, ರೋಡ್ ಸೇಫ್ಟಿ ಕಾರ್ಯಕ್ರಮಗಳು, ಮೆಂಟಲ್ ಹೆಲ್ತ್ ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಸಾಫ್ಟ್ ಸ್ಕಿಲ್ ಟ್ರೈನಿಂಗ್  ಹಾಗೂ ಪ್ರೈಮರಿ ಹೆಲ್ತ್ ಸೆಂಟರ್ ಗಳಿಗೆ ಇಸಿಜಿ ಮೆಷಿನ್ ಮತ್ತು  ಸಿಆರ್‍ ಆರ್ ಬಗ್ಗೆ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಕಾಲೇಜು ಮಕ್ಕಳಿಗೆ ಅರಿವು ಹಾಗೂ ಪ್ರಾತ್ಯಕ್ಷತೆ ನೀಡುವ ಬಗ್ಗೆ ಈ ವರ್ಷದ ಯೋಚನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಯೋಜಿತ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ  ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top