ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಉಪ್ಪಿನಂಗಡಿ ಘಟಕ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಉಪ್ಪಿನಂಗಡಿ ಸಹಕಾರದೊಂದಿಗೆ ಉಪ್ಪಿನಂಗಡಿಯ ನೂಜಿ ಎಂಬಲ್ಲಿ ನಿರ್ಮಿಸಿದ ಮನೆ ಸೇವಾಶ್ರಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಆನಂದ ಮತ್ತು ಸುಂದರಿ ದಂಪತಿಗಳಿಗೆ ನೂತನವಾಗಿ ನಿರ್ಮಿಸಿದ ಮನೆಯನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಸನ್ನ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಪ್ರಮುಖರಾದ ಚಂದಪ್ಪ ಮೂಲ್ಯ, ಮಹೇಂದ್ರ ವರ್ಮ, ಶ್ರೀರಾಮ ಭಟ್, ಪಂಚಾಯತ್ ಸದಸ್ಯರಾದ ಲೋಕೇಶ್ ಬೆತ್ತೋಡಿ, ಚಂದ್ರಶೇಖರ ಮಡಿವಾಳ, ಪಕ್ಷದ ಹಿರಿಯ ಮುಖಂಡರಾದ ಪುಷ್ಪಾ ಬಜತ್ತೂರು, ಪ್ರಶಾಂತ್ ನೆಕ್ಕಿಲಾಡಿ, ರಾಜು ಶೆಟ್ಟಿ ಉಪಸ್ಥಿತರಿದ್ದರು.