ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್.ಎಸ್.ಎಸ್ ಸ್ವಯಂ ಸೇವಕ ಶರತ್ ಮಡಿವಾಳ ಸ್ಮಾರಕಕ್ಕೆ ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ ನೀಡಿದರು.

ತಾಯಿ ಭಾರತೀಯ ಸೇವೆಗೆ ಜೀವನವನ್ನೇ ಮುಡಿಪಾಗಿಟ್ಟು ವೀರ ಮರಣಹೊಂದಿದ ಸ್ವಯಂಸೇವಕ ಶರತ್ ಮಡಿವಾಳ ಅವರ ಬಲಿದಾನ ದಿನದ ಸ್ಮರಣಾರ್ಥವಾಗಿ ಸಜಿಪ ಕಂದೂರಿನಲ್ಲಿರುವ ಅವರ ಮನೆಗೆ ಭೇಟಿ ನೀಡಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶರತ್ ಮಡಿವಾಳ ಕುಟುಂಬಸ್ಥರು ಉಪಸ್ಥಿತರಿದ್ದರು.