ಕಡಬ : ತಾಲೂಕಿನ ಕಾಣಿಯೂರು ಏಲಡ್ಕ ರಜತ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ದಿ ಪವರ್ ಪ್ಲಸ್ ಸೋಲಾರ್ ಸಂಸ್ಥೆಯ ರಾಧಾಕೃಷ್ಣ ಗೌಡರಿಗೆ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ನಿಂದ ಸೇವಾ ರತ್ನ ನೀಡಿ ಪುರಸ್ಕರಿಸಲಾಗಿದೆ.

ಜು.5 ರಂದು ಮಂಗಳೂರು ರೀಜನಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಮ್ಯಾನೇಜರ್ ಪೂಜಿತ್, ಜಗದೀಶ್ ಬೆಳ್ಳಾರೆ, ತಾರನಾಥ ಪುತ್ತೂರು ಉಪಸ್ಥಿತರಿದ್ದರು.