ಉಪ್ಪಿನಂಗಡಿ : ಕುಮಾರಧಾರ ನದಿಗೆ ನಿರ್ಮಿಸಲಾಗಿದ್ದ ಬ್ರಿಟಿಷರ ಕಾಲದ ಸೇತುವೆಯಲ್ಲಿ ವಾಹನ ಸಂಚಾರ ಸಹಿತ ಸಾರ್ವಜನಿಕರಿಗೆ ಇದೀಗ ನಿರ್ಬಂಧ ಹೇರಲಾಗಿದೆ.
ಒಂದು ಕಾಲದಲ್ಲಿ ಬ್ರಿಟಿಷ್ ಕಾಲದ ಸೇತುವೆಯನ್ನು ವಾಹನ ಸಂಚಾರ ಹಾಗೂ ಸಾವರ್ಜನಿಕರು ಉಪಯೋಗಿಸುತ್ತಿದ್ದರು. ಬಹಳ ಇಕ್ಕಟ್ಟಾದ ಸೇತುವೆ ಇದಾಗಿತ್ತು. ಬಳಿಕ ದಿನಗಳಲ್ಲಿ ಇದೇ ನದಿಗೆ ಹೊಸ ಸೇತುವೆ ನಿರ್ಮಾಣಗೊಂಡ ಬಳಿಕ ಈ ಬ್ರಿಟಿಷರ ಕಾಲದ ಸೇತುವೆಯಲ್ಲಿ ಸಾರ್ವಜನಿಕರು ನಡೆಯಲಷ್ಟೇ ಉಪಯೋಗವಾಗುತ್ತಿತ್ತು. ಕೆಲವೊಂದು ದ್ವಿಚಕ್ರ ವಾಹನ ಈ ಸೇತುವೆಯಲ್ಲಿ ಚಲಾಯಿಸುತ್ತಿದ್ದವು.
ಇದೀಗ ಈ ಸೇತುವೆಯಲ್ಲಿ ಇನ್ಮುಂದೆ ಯಾವುದೇ ತರಹದ ವಾಹನ ಸಂಚಾರ ಹಾಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿಯೂ ಬ್ಯಾರಿಕೇಟ್ ಅಳವಡಿಸಿರುವ ಜಿಲ್ಲಾಡಳಿತ ಸೇತುವೆ ಬಂದ್ ಮಾಡಿದೆ.
ಸೇತುವೆಗೆ ಕಳ್ಳರಕಾಟದ ಬಗ್ಗೆ ವರದಿಯಾಗಿದ್ದು, ಸೇತುವೆಯ ಎರಡೂ ಪಾರ್ಶ್ವದ ಕಬ್ಬಿಣದ ಸರಳುಗಳನ್ನು ಕಳ್ಳರು ಕದ್ದೊಯ್ದ ಘಟನೆಯೂ ನಡೆದಿದೆ. ಅಲ್ಲದೆ ಅಪಾಯದ ಮುನ್ಸೂಚನೆ ಅರಿತ ಜಿಲ್ಲಾಡಳಿತ ಸೇತುವೆ ಮೇಲೆ ವಾಹನ, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
























