ಬೆಳ್ಳಾರೆ: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಬೆಳ್ಳಾರೆ ಶಾಖೆ ಒಂದು ವರ್ಷ ಯಶಸ್ವಿಯಾಗಿ ಪೂರೈಸಿ 2 ನೇ ವರ್ಷಕ್ಕೆ ಇಂದು ಪಾದಾರ್ಪಣೆ ಮಾಡಿತು.
ಇದರ ಅಂಗವಾಗಿ ಬೆಳಿಗ್ಗೆ ಕಚೇರಿಯಲ್ಲಿ ಗಣಹೋಮ ಹಾಗೂ ಲಕ್ಷ್ಮೀಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು, ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಧರ ಕಣಜಾಲು, ಸಲಹಾ ಸಮಿತಿ ಸದಸ್ಯರುಗಳಾದ ನಾರಾಯಣ ಗೌಡ ಆರ್ವಾರ, ಎಲ್ಯಣ್ಣ ಗೌಡ ಕುಳ್ಳಂಪಾಡಿ, ಉಮೇಶ ಕೆ.ಎಂ.ಬಿ.ಕಾನಾವು, ವಾಸುದೇವ ಗೌಡ ನಡ್ಕ, ರವೀಂದ್ರ ಮರಕ್ಕಡ, ಪದ್ಮನಾಭ ಬೀಡು, ರವಿನಾಥ ಮಡ್ತಿಲ, ಕಮಲಾವತಿ ಬೆಳ್ಳಾರೆ, ಪ್ರಶಾಂತ್ ತಂಟೆಪ್ಪಾಡಿ, ಕೃಷ್ಣಪ್ಪ ಗೌಡ ಕೋಡ್ತುಗುಳಿ, ಕೂಸಪ್ಪ ಗೌಡ ಮುಗುಪ್ಪು, ಶ್ರೀಧರ ಗೌಡ ಅಂಗಡಿಹಿತ್ಲು,ತಿರುಮಲೇಶ್ವರ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ನಿಕಟಪೂರ್ವಾಧ್ಯಕ್ಷ ವಿಶ್ವನಾಥ ಕೆಯ್ಯೂರು, ಉಮಾಕಾಂತ ಬೈಲಾಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ, ಶಾಖಾ ಪ್ರಬಂಧಕ ಕಾರ್ತಿಕ್ ಎಂ., ಆಂತರಿಕ ಲೆಕ್ಕಪರಿಶೋಧಕ ಧರ್ಮರಾಜ್ ಕೆ, ಕುಂಬ್ರ ಶಾಖಾ ಪ್ರಬಂಧಕ ಹರೀಶ್ ರೈ, ಸಿಬ್ಬಂದಿ ವರ್ಗದವರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.