ನದಿಗೆ ಮೀನು ಹಿಡಿಯಲು ಹೋದ ವ್ಯಕ್ತಿಯ ಶವ ಪತ್ತೆ

ಬಿ.ಸಿ.ರೋಡ್ : ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದ ವ್ಯಕ್ತಿಯ ಶವ   ಪತ್ತೆಯಾಗಿದೆ.

ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ಈ ಘಟನೆ ನಡೆದಿದ್ದು ಇದೀಗ ಮೈಕಲ್ ಅವರ ಶವ ಪತ್ತೆಯಾಗಿದೆ.

ಮೈಕಲ್ ಅವರು ಸುದೀಪ ಹಾಗೂ ದಯಾನಂದ, ಜನಾರ್ದನ ಎಂಬವರ ಜೊತೆಗೆ ನದಿಗೆ ತೆರಳಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಸಂಜೆ ಸುಮಾರು 6.15 ರ ಹೊತ್ತಿಗೆ ಸುದೀಪ ಮತ್ತು ದಯಾನಂದರು ಮನೆಗೆ ತೆರಳಿದ್ದು, ಸ್ವಲ್ಪ ಹೊತ್ತಿನ ಬಳಿಕ ಜನಾರ್ದನ ಅವರು ಕೂಡ ಅಂಗಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ನದಿಗೆ ಇಳಿದ ಮೈಕಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಘಟನೆ ಸಂಭವಿಸಿದ ಕೂಡಲೇ ಬಂಟ್ವಾಳ ಅಗ್ನಿ ಶಾಮಕ ದಳದವರು ಆಗಮಿಸಿ ರಾತ್ರಿ ವರೆಗೂ ಶೋಧ ನಡೆಸಿದರು. ಮೃತದೇಹ ಇದೀಗ ಪತ್ತೆಯಾಗಿದೆ.































 
 

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top