ಬಿ.ಸಿ.ರೋಡ್ : ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಸಂದರ್ಭ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿ ಹೋದ ಘಟನೆ ಗುರುವಾರ ಸಂಜೆ ಅಜಿಲಮೊಗರು ಸೇತುವೆ ಬಳಿ ನಡೆದಿದೆ.
ಮಣಿನಾಲ್ಕೂರು ಗ್ರಾಮದ ಕುಟೇಲು ಎಂಬಲ್ಲಿಗೆ ಸುರತ್ಕಲ್ ನ ಕಾನ ನಿವಾಸಿ ಮೈಕಲ್ (53) ನೀರು ಪಾಲಾದವರು.
ಮೈಕಲ್ ಅವರು ಸುದೀಪ ಹಾಗೂ ದಯಾನಂದ, ಜನಾರ್ದನ ಎಂಬವರ ಜೊತೆಗೆ ನದಿಗೆ ತೆರಳಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದರು. ಸಂಜೆ ಸುಮಾರು 6.15 ರ ಹೊತ್ತಿಗೆ ಸುದೀಪ ಮತ್ತು ದಯಾನಂದರು ಮನೆಗೆ ತೆರಳಿದ್ದು, ಸ್ವಲ್ಪ ಹೊತ್ತಿನ ಬಳಿಕ ಜನಾರ್ದನ ಅವರು ಕೂಡ ಅಂಗಡಿಗೆ ತೆರಳಿದ್ದರು. ಆ ಸಂದರ್ಭದಲ್ಲಿ ನದಿಗೆ ಇಳಿದ ಮೈಕಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆ ಸಂಭವಿಸಿದ ಕೂಡಲೇ ಬಂಟ್ವಾಳ ಅಗ್ನಿ ಶಾಮಕ ದಳದವರು ಆಗಮಿಸಿ ರಾತ್ರಿ ವರೆಗೂ ಶೋಧ ನಡೆಸಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.