ಪಾಕಿಸ್ತಾನ: 6 ದಿನಗಳ ಕಾಲ ವ್ಯಾಟ್ಸ್‌ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿಷೇಧಿಸಲಾಗಿದೆ.
ಕಳೆದ ನಾಲ್ಕು ತಿಂಗಳಿಂದ ಎಕ್ಸ್ ನಿಷೇಧಿಸಿರುವ ಪಾಕಿಸ್ತಾನ ಇದೀಗ ಫೇಸ್‌ಬುಕ್, ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಮುಂದಿನ 6 ದಿನ ಸಂಪೂರ್ಣ ಬಂದ್ ಮಾಡಲಾಗಿದೆ. ಜುಲೈ 13ರಿಂದ 18ರ ವರೆಗೆ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾಗೆ ನಿರ್ಬಂಧ ವಿಧಿಸಲಾಗಿದೆ. ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ವಿಡಿಯೋ, ಫೋಟೋಗಳು, ಸಂದೇಶ ಹರಡದಂತೆ ತಡೆಯಲು ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.
ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಸ್ತಾವನೆ ಸಲ್ಲಿಸಿದ್ದರು.
ಪಂಜಾಬ್ ಪ್ರಾಂತ್ಯದಲ್ಲಿ ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ಸಂದೇಶಗಳು, ವಿಡಿಯೋಗಳನ್ನು ಹರಡುವುದು ಹೆಚ್ಚಾಗುತ್ತಿದೆ. ಇದರಿಂದ ರಂಜಾನ್ ತಿಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಜೊತೆಗೆ ಪವಿತ್ರ ತಿಂಗಳಲ್ಲಿ ಈ ರೀತಿಯ ಘಟನೆಗೆ ಅವಕಾಶ ನೀಡದಂತೆ ತಡೆಯಲು ಈ ಕ್ರಮ ಕೈಗೊಂಡಿದೆ. ಜುಲೈ 4ರ ತಡರಾತ್ರಿ ಪಂಜಾಬ್ ಪ್ರಾವಿನ್ಸ್ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ.