ಸಾಮಾಜಿಕ ಜಾಲತಾಣದಿಂದ ಲಕ್ಷಾಂತರ ಹಣ  ಕಳೆದುಕೊಂಡ ಮಣಿಪಾಲದ ಯುವತಿ

ಮಣಿಪಾಲ : ವಾಟ್ಸ್ಆ್ಯಪ್‌ನಲ್ಲಿ ಬಂದ ಸಂದೇಶವನ್ನು ಕ್ಲಿಕ್ ಮಾಡಿ ಟಾಸ್ಕ್ ಪೂರ್ಣಗೊಳಿಸಿ ಹಣ ಸಂಪಾದಿಸುವ ನಿಟ್ಟಿನಲ್ಲಿ ಯುವತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

ಹಣ ಕಳೆದುಕೊಂಡ ವಿದ್ಯಾರ್ಥಿನಿ ಮಣಿಪಾಲದಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡಿಕೊಂಡಿರುವ ಗಿಟಿಕಾ ಬಸಿನ್.

ಈಕೆ ಜೂ. 23ರಂದು ತನ್ನ ಕೊಠಡಿಯಲ್ಲಿರುವಾಗ Review job & Pre Paid Tasks ಎಂಬ ಸಂದೇಶವನ್ನು ವಾಟ್ಸ್ಆ್ಯಪ್ ನಲ್ಲಿ ಸ್ವೀಕರಿಸಿರುತ್ತಾಳೆ. ಸಂದೇಶದ ಪ್ರಕಾರ ಆಕೆ ಅದರಲ್ಲಿರುವ ಟಾಸ್ಕ್ ಗಳನ್ನು ಪೂರ್ಣಗೊಳಿಸಿದಾಗ ಅವರ ಬ್ಯಾಂಕ್ ಖಾತೆಗೆ 205 ರೂ.ಜಮೆಯಾಯಿತು. ಅನಂತರ ಅಪರಿಚಿತ ವ್ಯಕ್ತಿ ಅವರ ಟೆಲಿಗ್ರಾಂ ಆ್ಯಪ್ ಗೆ Linkdin idea 2024 Jrlul 827pd ಎಂಬ ಲಿಂಕ್ ಕಳುಹಿಸಿ ಜಾಯಿನ್ ಆಗುವಂತೆ ತಿಳಿಸಿದ್ದರು. ಗ್ರೂಪ್‌ಗೆ ಸೇರ್ಪಡೆಯಾದ ಬಳಿಕ Pre Paid Tasks ನಲ್ಲಿ ಹೂಡಿಕೆ ಮಾಡುವಂತೆ ತಿಳಿಸಲಾಯಿತು. ನಂತರದಲ್ಲಿ ಆಕೆ 4,600 ರೂ. ಹೂಡಿಕೆ ಮಾಡಿದಾಗ ಅವರ ಖಾತೆಗೆ 5,850 ರೂ. ಜಮೆ ಮಾಡುವ ಮೂಲಕ ವಂಚಕರು ವಿದ್ಯಾರ್ಥಿನಿಯನ್ನು ಮೋಸದ ಬಲೆಗೆ ಬೀಳಿಸಿಕೊಂಡರು. ಎರಡು ಬಾರಿ ಅನಾಯಾಸವಾಗಿ ಹಣ ಗಳಿಸಿದ ಯುವತಿಯು “ಹೆಚ್ಚಿನ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ನೀಡುತ್ತೇವೆ’ ಎಂಬ ಅಪರಿಚಿತರ ಸೂಚನೆ ಮೇರೆಗೆ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಒಟ್ಟು 2,20,100 ರೂ.ಗಳನ್ನು ಅಪರಿಚಿತರ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದರು. ಇದಾದ ಬಳಿಕ ವಂಚಕರು ಹಣವನ್ನು ಮರಳಿಸದೆ ವಂಚನೆ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top