ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ 2.06 ಕೋಟಿ ಲಾಭ | ನಿರ್ದೇಶಕರ ಸಭೆಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷರು

ವಿಟ್ಲ : ಕುಳ ಮತ್ತು ಇಡ್ಕಿದು 2 ಗ್ರಾಮಗಳ ವ್ಯಾಪ್ತಿಯಲ್ಲಿರುವ ಸದಸ್ಯ ಗ್ರಾಹಕರ ಆಶೋತ್ತರಗಳನ್ನು ಈಡೇರಿಸುತ್ತ ಬಂದಿರುವ ಇದು ಸೇವಾ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿಒಟ್ಟು ರೂ 441 ಕೋಟಿ ವ್ಯವಹಾರ ನಡೆಸಿ ಸುಮಾರು ರೂ.2.06ಕೋಟಿ ಲಾಭಗಳಿಸಿ 94% ವಸೂಲಾತಿಯನ್ನು ಮಾಡಿದೆ ಎಂದು ಸಂಘದ ಅಧ್ಯಕ್ಷರಾದ ಬಿ. ಸುಧಾಕರ್ ಶೆಟ್ಟಿರವರು ಹೇಳಿದರು.

ಅವರು ಇಡ್ಕಿದು ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯಲ್ಲಿ ಸಂಘದ ವ್ಯವಹಾರಗಳನ್ನು ಗ್ರಾಹಕರಿಗೆ ತಿಳಿಸುವ ಉದ್ದೇಶದಿಂದ ನಡೆಸಿದ ನಿರ್ದೇಶಕರ ಸಭೆಯಲ್ಲಿ ಮಾಹಿತಿ ಬಿಡುಗಡೆ ಮಾಡಿ ಮಾತನಾಡಿದರು.

ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಉರಿಮಜಲಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಇಡ್ಕಿದು ಸೇವಾ ಸಹಕಾರಿ ಸಂಘವು ಇಡ್ಕಿದು ಮತ್ತು ಕುಳ ಗ್ರಾಮಗಳ ವ್ಯಾಪ್ತಿಯಲ್ಲಿ 1919 ರಲ್ಲಿ ಸ್ಥಾಪನೆಯಾಗಿ, 105 ವರ್ಷ ಸುದೀರ್ಘವಾಗಿ ಸದಸ್ಯರಿಗೆ ಉತ್ತಮ ಸೇವೆಯನ್ನು ನೀಡಿ, ಸಂಘವು ಒಟ್ಟು 2 ಎಕ್ರೆ ಸ್ವಂತ ಸ್ಥಳದಲ್ಲಿ ಕೇಂದ್ರ ಕಛೇರಿ ಉರಿಮಜಲು ಹಾಗೂ ಮಿತ್ತೂರು, ಸೂರ್ಯ, ಕುಂಡಡ್ಕ ಅಡ್ಯಾಲು ಕರೆ ಎಂಬಲ್ಲಿ ಸುಸಜ್ಜಿತ ಸ್ವಂತ ಕಟ್ಟಡಗಳಲ್ಲಿ 4 ಶಾಖೆಗಳನ್ನು ತೆರೆದು ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಅದರಲ್ಲಿ 2000 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮುಗಳಿವೆ. 2023-24 ನೇ ಮಾರ್ಚ್ ಅಂತ್ಯಕ್ಕೆ ಸಂಘದಲ್ಲಿ 4079 ಸದಸ್ಯರಿದ್ದು, ಈ ಪೈಕಿ 3650ಕ್ಕೂ ಹೆಚ್ಚು ಸದಸ್ಯರು ಸಂಘದಿಂದ ಸಾಲ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಸಂಘದಲ್ಲಿ ವರದಿ ವರ್ಷದ ಅಂತ್ಯಕ್ಕೆ ರೂ. 4.06 ಕೋಟಿ ಪಾಲುಬಂಡವಾಳವಿದ್ದು, ರೂ 3.37 ಕೋಟಿ ರೂ ಕ್ಷೇಮ ನಿಧಿ, ರೂ.2.90 ಕೋಟಿ ಇತರ ನಿಧಿಗಳನ್ನು ಸಂಗ್ರಹಿಸಿದೆ.































 
 

ರೂ. 106 ಕೋಟಿ ಠೇವಣಿ ಸಂಗ್ರಹಿಸಿ ರೂ.66.50 ಕೋಟಿ ಸಾಲ ನೀಡಿದೆ. ದುಡಿಯುವ ಬಂಡವಾಳ ರೂ. 172 ಕೋಟಿ ಆಗಿದ್ದು, ಒಟ್ಟುರೂ.441 ಕೋಟಿ ವ್ಯವಹಾರ ಮಾಡಿ ಅಂದಾಜು ರೂ. 2.06 ಕೋಟಿ ಲಾಭ ಗಳಿಸಿ 94% ವಸೂಲಾತಿಯನ್ನು ಕಂಡಿದೆ. ಒಟ್ಟು 192 ಸ್ವಸಹಾಯ ಗುಂಪುಗಳಿದ್ದು, ಅವುಗಳ ಪೈಕಿ 80% ಮಹಿಳಾ ಗುಂಪುಗಳಿವೆ.

ಸಾಲ ಪಡೆದ ಗುಂಪುಗಳು 100% ಸಾಲ ಮರು ಪಾವತಿಯಾಗುತ್ತಿದೆ. ಎಲ್ಲಾ ತರಹದ ಠೇವಣಿಯನ್ನು ಪಡೆದು ಎಲ್ಲಾ ತರಹದ ಸಾಲವನ್ನು ನೀಡುವುದಲ್ಲದೆ, ರಾಸಾಯನಿಕ, ಸಾವಯವ ಗೊಬ್ಬರ ಮಾರಾಟ ಕೃಷಿ ಉಪಕರಣಗಳ ಮಾರಾಟ ಹಾಗೂ ಎಲ್ಲಾ ಶಾಖೆಗಳಲ್ಲಿ ಸೂಪರ್ಬಜಾ‌ರ್, ಮಾರಾಟದ ವ್ಯವಸ್ಥೆ, ಜನೌಷಧಿ, ಹಾಗೂ ಆರೋಗ್ಯ ಕೇಂದ್ರಗಳಿವೆ ಎಂದರು.

ಭೂಮಿಕಾ ಹೆಸರಲ್ಲಿ ಕೃಷಿ ಉಪಕರಣಗಳಾದ ಕೈ ಗಾಡಿ, ಫಿಕ್ಕಾಸು, ಹಾರೆ, ಬುಟ್ಟಿ, ಇತ್ಯಾದಿಗಳನ್ನು ಬಾಡಿಗೆಗೆ ನೀಡುತ್ತಿದೆ, ಅಲ್ಲದೇ ಸಭಾಂಗಣ ಅತಿಥಿಗೃಹ, ವ್ಯಾಪಾರ ಸಂಕೀರ್ಣ ಬಾಡಿಗೆಗೆ ಲಭ್ಯವಿದೆ., ಕೋರ್ ಬ್ಯಾಂಕಿಂಗ್‌, ಸೇಫ್ ಲಾಕರ್ ವ್ಯವಸ್ಥೆ ಸೇರಿದಂತೆ ಆಧುನಿಕತೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಸ್ಥೆಯ ಸುರಕ್ಷತೆಗೆ ಸಿಸಿಕ್ಯಾಮರ, ಸೈರನ್, ಸೆಕ್ಯೂರಿಟಿಗಾರ್ಡ್ ವ್ಯವಸ್ಥೆ ಮಾಡಲಾಗಿದೆ. ಕಳೆದ 40 ವರ್ಷಗಳಿಂದ ಆಡಳಿತ ಮಂಡಳಿಯ ಆಯ್ಕೆಯು ಅವಿರೋಧವಾಗಿ ನಡೆಯುತ್ತಿದೆ ಎಂದರು.

ಸಾಮಾಜಿಕ ಚಟುವಟಿಕೆಗಳು :

ಪ್ರತಿವರ್ಷ ಸದಸ್ಯರಿಗೆ ವೈದ್ಯಕೀಯ ಶಿಬಿರ 29 ವರ್ಷಗಳಿಂದ ಇಡ್ಕಿದು ಗ್ರಾಮ ಪಂಚಾಯತ್ ನ ಸಹಯೋಗಗಳೊಂದಿಗೆ ನಿರಂತರವಾಗಿ ಹುಚ್ಚು ನಾಯಿ ನಿರೋಧಕ ಶಿಬಿರದಲ್ಲಿ ಪಾಲ್ಗೊಳ್ಳುವಿಕೆ, ಸಂಘದ ಶತಮಾನೋತ್ಸವ ನಿಮಿತ್ತ ಆರೋಗ್ಯಮೃತ ಯೋಜನೆಯಡಿಯಲ್ಲಿ 100 ಹಿರಿಯ ನಾಗರಿಕರಿಗೆ ಒಂದು ತಿಂಗಳ ಔಷಧಿ ವಿತರಣೆ ಮಾಡಲಾಗಿದೆ. ಎರಡು ಗ್ರಾಮಗಳಲ್ಲಿರುವ ಸುಮಾರು 24 ನುರಿತ ವೈದ್ಯರುಗಳನ್ನು ಸೇರಿಸಿಕೊಂಡು ಸಮಾಲೋಚನೆ ನಡೆಸಿ ಸಂಘದ ಸದಸ್ಯರಿಗೆ ವೈದ್ಯರು ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ. ಇದೇ ರೀತಿ ಗ್ರಾಮಗಳ ಜನರ ಹಿತಕಾಯುವ ದೃಷ್ಠಿಯಿಂದ ಸಂಘವು ಸಮಾಜಮುಖಿಯಾಗಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದರು.

ವಿದ್ಯಾಮೃತ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ 10 ವಿದ್ಯಾರ್ಥಿಗಳಿಗೆ 10ನೇ ತರಗತಿಯವರೆಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುತ್ತಿದೆ. ಅಲ್ಲದೇ ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ನೀಡಲು ಆರ್ಥಿಕ ನೆರವು ನೀಡುತ್ತಿದೆ. ಉದ್ಯೋಗಮೃತ ಯೋಜನೆಯ ಅಡಿಯಲ್ಲಿ ನುರಿತ ವೃತ್ತಿಪರರಿಂದ ಕೌಶಲ್ಯಭಿವೃದ್ಧಿಗಾಗಿ ಸದಸ್ಯರಿಗೆ, ಮಹಿಳೆಯರಿಗೆ 7 ದಿವಸದ ಉಚಿತ ತರಬೇತಿ ನೀಡಲಾಗಿದೆ. ಈ ಶಿಬಿರ ಸದುಪಯೋಗವನ್ನು ಪಡೆದುಕೊಂಡ ಸುಮಾರು 50ಕ್ಕೂ ಹೆಚ್ಚು ಸದಸ್ಯರು ಸ್ವಂತ ಉದ್ಯೋಗಮಾಡಿಕೊಂಡು ಜೀವನಸಾಗಿಸುತ್ತಿದ್ದಾರೆ.

ಸಂಘವು ನಬಾರ್ಡಿನ ವತಿಯಿಂದ ದೇಶದ ಬೇರೆ ಬೇರೆ ರಾಜ್ಯಗಳಿಂದ ರಾಷ್ಟ್ರೀಕೃತ ಬ್ಯಾಂಕಿನ ಅಧೀಕರಿಗಳು, ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ನೌಕರರು ಹಾಗೂ ಇಲಾಖಾಧಿಕಾರಿಗಳು ಹೀಗೆ ವರ್ಷದಲ್ಲಿ 10 ರಿಂದ 12 ತಂಡಗಳು ಬೇಟಿ ನೀಡಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಸಂಶೆಯನ್ನು ವ್ಯಕ್ತ ಪಡಿಸಿದೆ ಎಂದು ತಿಳಿಸಿದರು.

ಮುಂದಿನ ಯೋಜನೆ :

ಸಂಘವು ಈಗಿನ ಕಾಲಘಟ್ಟಕ್ಕೆ ಬೇಕಾದ ರೀತಿಯಲ್ಲಿ ವ್ಯವಹಾರ ನಡೆಸುತ್ತಾ ಬರುತ್ತಿದ್ದು, ಸೇವೆಯನ್ನು ಇನ್ನಷ್ಟು ಉತ್ತಮ ಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದೆ. ಅದರಂತೆಯೇ ಮುಂದಿನ ದಿನಗಳಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿ ಶೇ.20ರಷ್ಟು ಹೆಚ್ಚಿನ ಗುರಿ ಸಾಧಿಸುವಲ್ಲಿ ಪ್ರಯತ್ನ. ಸಂಘದ ಪ್ರಧಾನ ಕಚೇರಿ ಸೇರಿದಂತೆ ಎಲ್ಲಾ ಶಾಖೆಗಳಲ್ಲಿ ಆ‌ರ್.ಟಿ.ಜಿ.ಎಸ್, ನೆಫ್ಟ್, ಸ್ಟ್ಯಾಂಪ್ಪೇಪ‌ರ್, ಆ‌ರ್.ಟಿ.ಸಿ, ಇಸಿ ಪಡೆಯುವ ಸೇವಾಕೇಂದ್ರ ತೆರೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಕಚೇರಿಯಲ್ಲಿ ಮದುವೆ ಸಮಾರಂಭಗಳಿಗೆ ಸಭಾಂಗಣವೊಂದನ್ನು ನಿರ್ಮಾಣ ಮಾಡಲಾಗುವುದು,ಅಲ್ಲದೇ ಕೇಂದ್ರ ಸರಕಾರದ ಏಕರೂಪದ ತಂತ್ರಾಂಶವನ್ನು ಅಳವಡಿಸಲಾಗುವುದು ಎಂದರು. ಸಂಘದ ಉಪಾಧ್ಯಕ್ಷರಾದ ಎನ್. ರಾಮ್ ಭಟ್ ನೀರಪಳಿಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ ಎಸ್, ವೃತ್ತಿಪರ ನಿರ್ದೇಶಕರಾದ ಗೋಪಾಲಕೃಷ್ಣಭಟ್‌, ನಿರ್ದೇಶಕರಾದ ಪ್ರವೀಣ್ ಕುಮಾ‌ರ್ ಕೊಪ್ಪಳ, ನಾರಾಯಣ ನೇರ್ಲಾಜೆ, ಜಯಂತ ದರ್ಬೆ ಮಿತ್ತೂರು, ಕೆ.ವಿ ಶಿವಪ್ರಕಾಶ್ ಮಿತ್ತೂರು, ಪಿ.ಸುಂದರ ಗೌಡ ಪಾಂಡೇಲು, ಶೇಖರ ನಾಯ್ಕ ಅಳಕೆಮಜಲು, ವಸಂತ ಗೌಡ ಉರಿಮಜಲು, ಜನಾರ್ಧನ ಕಾರ್ಯಾಡಿ, ನಳಿನಿ ಪೆಲತ್ತಿಂಜ, ವಿಜಯಲಕ್ಷ್ಮೀ ಪಿಲಿಪ್ಪೆ, ರತ್ನಾ ಸೇಕೆಹಿತ್ತು ಮೊದಲಾದವರು ಉಪಸ್ಥಿತರಿದ್ದರು. ಸಂಘವು ಸರ್ವರ ಸಹಕಾರದಿಂದ ನಿರಂತರವಾಗಿ ಬಹಳ ಯಶಸ್ವಿಯತ್ತ ಹೆಜ್ಜೆಹಾಕುತ್ತಿದೆ. ಗ್ರಾಮೀಣ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರಿಗೆ ಅತ್ಯುತ್ತಮ ಸೇವೆ ಒದಗಿಸಬೇಕೆನ್ನುವ ಆಶಯದೊಂದಿಗೆ ನಮ್ಮ ಎಲ್ಲಾ ಶಾಖೆಗಳಿಗೆ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿದ್ದೇವೆ. ಸರ್ವ ಸರಕಿನ ಮಳಿಗೆಯು ಸೇರಿದಂತೆ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವೆಗಳು ಎಲ್ಲಾ ಕಡೆಗಳಲ್ಲಿಯೂ ಲಭ್ಯವಿದೆ. ಗ್ರಾಮದ ಜನರ ಆಶೋತ್ತರಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ನ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು

ಮಾಡುವುದರ ಮುಖಾಂತರ ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಕಾರ್ಯ ರೂಪಕ್ಕೆ ತರಲಾಗಿದೆ. ಇದೀಗ ಪ್ರಥಮ ಭಾರಿಗೆ ಸಂಘವು ಸುಮಾರು ೨.೦೬ ಕೋಟಿಗೂ ಅಧಿಕ ಲಾಭಗಳಿಸುವಲ್ಲಿ ಸಹಕರಿಸಿದ ಹಾಗೂ ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ತಮಗೆಲ್ಲರಿಗೂ ನಾವು ಸದಾ ಆಭಾರಿಯಾಗಿದ್ದೇವೆ. ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.

-ಸುಧಾಕ‌ರ್ ಶೆಟ್ಟಿ ಬೀಡಿನಮಜಲು ಅಧ್ಯಕ್ಷರು, ಇಡ್ಕಿದು ಸೇವಾ ಸಹಕಾರಿ ಸಂಘ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top