ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ರಾಜ್ಯಮಟ್ಟದ ಅಂತರ್ ಕಾಲೇಜು ಅತ್ಲೆಟಿಕ್ | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುರುಷರ ವಿಭಾಗದಲ್ಲಿ ಚಾಂಪಿಯನ್, ಮಹಿಳೆಯರ ವಿಭಾಗದಲ್ಲಿ ರನ್ನರ್ ಅಪ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ 25 ನೇ ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ ಪುರುಷರ ವಿಭಾಗದ ಚಾಂಪಿಯನ್‌ಶಿಪ್ ಟ್ರೋಫಿ ಹಾಗೂ ಮಹಿಳೆಯರ ವಿಭಾಗದ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್ ಟ್ರೋಫಿಯೊಂದಿಗೆ ಸತತ ಮೂರನೇ ಬಾರಿ ಕೂಟದ ಸಮಗ್ರ ಪ್ರಶಸ್ತಿಯನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮೈಸೂರು ವಿಭಾಗದ ಆಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು. ಜಿದ್ದಾಜಿದ್ದಿನ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳು ಇತರ ತಂಡಗಳನ್ನು ಮಣಿಸಿ ಹ್ಯಾಟ್ರಿಕ್ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರ ವಿಭಾಗದಲ್ಲಿ ಪ್ರಥಮ ವರ್ಷದ ಡಾಟಾ ಸೈನ್ಸ್ ವಿಭಾಗದ ಭುವನ್ ಕುಮಾರ್ ಲಾಂಗ್ ಜಂಪ್ ನಲ್ಲಿ ಚಿನ್ನ ಹಾಗೂ 4*100 ಮೀ ರಿಲೇಯಲ್ಲಿ ಬೆಳ್ಳಿ, ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ಜೀವನ್ ಡೆಕತ್ಲಾನ್ ಸ್ಪರ್ಧೆಯಲ್ಲಿ ಚಿನ್ನ, ತೃತೀಯ ಎಐಎಂಎಲ್ ವಿಭಾಗದ ಅನ್ವಿತ್.ಬಿ.ಎಂ. 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಚಿನ್ನ, ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ನಂದೀಶ್.ಬಿ.ಟಿ 4*400 ಮೀ. ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಹಾಗೂ 4*400 ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ವರ್ಷದ ಕಂಪ್ಯೂಟರ್ ವಿಭಾಗದ ಕಾರ್ತಿಕ್.ಆರ್ 4*100 ಮೀ ರಿಲೇಯಲ್ಲಿ ಬೆಳ್ಳಿ ಹಾಗೂ 110 ಮೀ ಹರ್ಡಲ್ಸ್‌ನಲ್ಲಿ ಬೆಳ್ಳಿ, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ಸಂಭ್ರಮ್ 4*400 ಮೀ ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ ಹಾಗೂ 4*400 ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಕಂಪ್ಯೂಟರ್ ವಿಭಾಗದ ವೀಕ್ಷಿತ್ ಗೌಡ.ವಿ.ಪಿ 4*400 ಮೀ. ರಿಲೇಯಲ್ಲಿ ಬೆಳ್ಳಿ, ತೃತೀಯ ಎಐಎಂಎಲ್ ವಿಭಾಗದ ಮಣಿಸ್ಕಂದ.ಡಿ.ಕೆ. 4*400 ಮೀ ರಿಲೇಯಲ್ಲಿ ಬೆಳ್ಳಿ, ತೃತೀಯ ಎಐಎಂಎಲ್ ವಿಭಾಗದ ಜಗದೀಶ್.ಕೆ 4*100 ಮೀ. ರಿಲೇಯಲ್ಲಿ ಬೆಳ್ಳಿ, ದ್ವಿತೀಯ ವರ್ಷದ ಎಂಬಿಎ ವಿಭಾಗದ ವಿಲಾಸ್ ಚೌಟ.ಬಿ ಪೋಲ್ ವಾಲ್ಟ್ ನಲ್ಲಿ ಬೆಳ್ಳಿ, ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಅಭಿನಂದನ್ ಡೆಕತ್ಲಾನ್‌ನಲ್ಲಿ ಬೆಳ್ಳಿ, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ರಮಿತ್‌ರಾಜ್.ಎನ್.ಎಸ್. 4*100 ಮೀ. ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಹರ್ಷಿತ್.ಎಂ.ನಾಯ್ಕ್ ಹ್ಯಾಮರ್ ಥ್ರೋನಲ್ಲಿ ಕಂಚು, ದ್ವಿತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಸನ್ಮಿತ್.ಆರ್.ಸಿ 110 ಮೀ. ಹರ್ಡಲ್ಸ್‌ನಲ್ಲಿ ಕಂಚು ಮತ್ತು ತೃತೀಯ ಮೆಕ್ಯಾನಿಕಲ್ ವಿಭಾಗದ ಅಜಿತ್ ಕುಮಾರ್ ಎಂ. 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.







































 
 

ಮಹಿಳೆಯರ ವಿಭಾಗದಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಅರ್ಪಿತಾ ಬಾಲಚಂದ್ರ ನಾಯ್ಕ್ ಟ್ರಿಪಲ್ ಜಂಪ್‌ನಲ್ಲಿ ಚಿನ್ನ, 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಹಾಗೂ 4*400 ಮೀ. ರಿಲೇಯಲ್ಲಿ ಬೆಳ್ಳಿ, ತೃತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿನಿ ವಿದ್ಯಾ ಸಿ.ಎಸ್. 20 ಕಿ.ಮೀ. ನಡಿಗೆಯಲ್ಲಿ ಚಿನ್ನ, 10 ಕಿಮೀ ಓಟದಲ್ಲಿ ಮತ್ತು 4*400 ಮೀ. ರಿಲೇಯಲ್ಲಿ ಬೆಳ್ಳಿ ಹಾಗೂ  21 ಕಿಮೀ ಹಾಫ್ ಮ್ಯಾರಥಾನ್‌ನಲ್ಲಿ ಕಂಚಿನ ಪದಕ, ದ್ವಿತೀಯ ಎಂಬಿಎ ವಿಭಾಗದ ಯಶಿತಾ.ಎನ್. ಹೆಪ್ಟತ್ಲಾನ್ ನಲ್ಲಿ ಚಿನ್ನ, 100 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ, ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಜೀಕ್ಷಿತಾ ಕೆ. 4*400 ಮೀ ರಿಲೇಯಲ್ಲಿ ಬೆಳ್ಳಿ, 21 ಕಿಮೀ ಹಾಫ್ ಮ್ಯಾರಥಾನ್‌ನಲ್ಲಿ ಬೆಳ್ಳಿ ಮತ್ತು 1500 ಮೀ.  ಓಟದಲ್ಲಿ ಕಂಚಿನ ಪದಕ, ಪ್ರಥಮ ವರ್ಷದ ಎಲೆಕ್ಟ್ರಾನಿಕ್ಸ್ ವಿಭಾಗದ ಪೂಜಾಶ್ರೀ 200 ಮೀ. ಓಟದಲ್ಲಿ ಬೆಳ್ಳಿ ಹಾಗೂ 4*400 ಮೀ. ಮಿಕ್ಸೆಡ್ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಎಂಬಿಎ ವಿಭಾಗದ ನೀಕ್ಷಿತಾ ಶೆಟ್ಟಿ ಹ್ಯಾಮರ್ ಥ್ರೋನಲ್ಲಿ ಬೆಳ್ಳಿ, ದ್ವಿತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಿಂಚನ ಸಿ.ಎಸ್. ಪೋಲ್ ವಾಲ್ಟ್ ನಲ್ಲಿ ಬೆಳ್ಳಿ, ತೃತೀಯ ಕಂಪ್ಯೂಟರ್ ಸೈನ್ಸ್ ನ ಬಿಂದುಶ್ರೀ. ಎಚ್.ರೈ 4*400 ಮೀ. ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಅಶ್ವಿನಿ 4*400 ಮೀ. ರಿಲೇಯಲ್ಲಿ ಬೆಳ್ಳಿ, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಸುಪ್ರೀತಾ ಎನ್. ಎಸ್. 20 ಕಿಮೀ ನಡಿಗೆಯಲ್ಲಿ ಕಂಚು, ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ಶ್ರೇಯಾ ಎಂ. ಪೋಲ್ ವಾಲ್ಟ್ ನಲ್ಲಿ ಕಂಚು, ದ್ವಿತೀಯ ಎಐಎಂಎಲ್ ವಿಭಾಗದ ಚೈತನ್ಯ ಎ.ಎನ್. 100 ಮೀ. ಹರ್ಡಲ್ಸ್ ಮತ್ತು 400 ಮೀ. ಹರ್ಡಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಇದಲ್ಲದೆ ಪ್ರಫುಲ್.ಯು.ಎಸ್, ನಮಿತ್.ಜೆ, ಮಂಜುಶ್ರೀ ಎ., ಪ್ರತೀಕ್ಷಾ.ಆರ್., ದಿಶಾ, ವೈಶಾಲಿ, ವರ್ಷಿತಾ.ಪಿ. ಆಳ್ವ, ಮತ್ತು ಶ್ರಾವ್ಯ ಎಲ್.ಕೆ. ವಿಜೇತ ತಂಡದ ಇತರ ಸದಸ್ಯರಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬಾಲಚಂದ್ರ ಗೌಡ  ಭಾರ್ತಿಕುಮೇರು ಅವರ ಮಾರ್ಗದರ್ಶನದಲ್ಲಿ ಭಾರತೀಯ ಸೇನಾಪಡೆಗಳ ವಿಶ್ರಾಂತ ಅತ್ಲೆಟಿಕ್ ತರಬೇತುದಾರ ರವಿಶಂಕರ್ ಮುಕುಂದ ತರಬೇತಿ ನೀಡಿದ್ದರು ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top