ಬಂಟ್ವಾಳ ವಿಹಿಂಪ ಪ್ರಖಂಡದಿಂದ ಧಾರ್ಮಿಕ ಆಚರಣೆ ಕುರಿತು ಚಿಂತನಾ ಬೈಠಕ್

ಬಂಟ್ವಾಳ : ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ, ಚೌತಿ, ಶಾರದೋತ್ಸವದ ವಿವಿಧ ಸಮಿತಿಗಳ ಪ್ರಮುಖರ ಚಿಂತನಾ ಬೈಠಕ್ ಬಿ.ಸಿ.ರೋಡು ಸ್ಪರ್ಶಕಲಾ‌ಮಂದಿರದಲ್ಲಿ ನಡೆಯಿತು.

ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಜಿಲ್ಲಾ ಸತ್ಸಂಗ ಪ್ರಮುಖ ಕಶೆಕೋಡಿ ಸೂರ್ಯನಾರಾಯಣ ಭಟ್, ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಧಾರ್ಮಿಕ ಆಚರಣೆಯಲ್ಲಿ ನಾವು ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಚಿಂತನೆ ಕುರಿತು ಚರ್ಚಿಸಿದರು.  

ಈ ವಿಶೇಷ ಬೈಠಕ್ ನಲ್ಲಿ ತಾಲೂಕಿನ ವಿವಿಧ ಸಮಿತಿಗಳ 200 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದು ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಧರ್ಮ ಪ್ರಸರಣಾ ಪ್ರಮುಖ ಸುರೇಶ್ ಬೆಂಜನಪದವು ಅಲ್ಲದೇ ಪ್ರಖಂಡದ ಪ್ರಮುಖರು ಹಾಜರಿದ್ದರು. ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಕುಂಟಾಲಪಲ್ಕೆ ವೈಯಕ್ತಿಕ ಗೀತೆ‌ಹಾಡಿದರು.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top