ಪುತ್ತೂರು: ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರ ಮಾಡುವವರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸ್ವ ನಿಧಿಯಿಂದ ಸಮೃದ್ಧಿ ಕಾರ್ಯಕ್ರಮ ನಗರಸಭೆ ಸಭಾಂಗಣದಲ್ಲಿ ನಡೆಯಿತು.
ಯೋಜನೆಯ ಸೌಲಭ್ಯಗಳ ಬಗ್ಗೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಇಸುಬು, ಸಹಾಯಕ ಕಾರ್ಯಪಾಲಕ ಅಭಿಯಂತರ ಶಬರಿನಾಥ್, ಲೆಕ್ಕಾಧೀಕ್ಷಕ ಸಿ.ಆರ್.ದೇವಾಡಿಗ, ಸಹಾಯಕ ಅಭಿಯಂತರ ಕೃಷ್ಣಮೂರ್ತಿ ರೆಡ್ಡಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾಕಿರಣ್, ವರಲಕ್ಷ್ಮಿ, ಪ್ರೋಗ್ರಾಮರ್ ವಿನೋದ್ ಜೋಷಿ ಉಪಸ್ಥಿತರಿದ್ದರು.
ಜಯಲಕ್ಷ್ಮಿ ಬೇಕಲ್ ಸ್ವಾಗತಿಸಿ, ವಂದಿಸಿದರು. ಸಮುದಾಯ ಸಂಘಟನಾಧಿಕಾರಿ ಕರುಣಾಕರ ವಿ. ಕಾರ್ಯಕ್ರಮ ನಿರ್ವಹಿಸಿದರು. ಸಿ.ಆರ್.ಪಿ. ತಾರಾ ಮತ್ತು ಸಂತೋಷ್ ಸಹಕರಿಸಿದರು.