ಪ್ರಗತಿಪರ ಕೃಷಿಕ ಅವಿನಾಶ್ ಕೊಡಂಕಿರಿ ಅವರಿಗೆ ‘ಅರಣ್ಯ ಮಿತ್ರ’ ಪ್ರಶಸ್ತಿ | ಕಾಡು ಮಾವು ಹಣ್ಣು, ಗಿಡಗಳ ರಕ್ಷಣೆಗೆ ಒಲಿಯಿತು ಪ್ರಶಸ್ತಿ

ಪುತ್ತೂರು: ಪರಿಸರ, ವನಸಂರಕ್ಷಣೆ ಹಾಗೂ ನೀರಿಂಗಿಸುವಿಕೆಯನ್ನು ಆದ್ಯತೆಯ ವಿಷಯಗಳನ್ನಾಗಿ ಮೈಗೂಡಿಸಿಕೊಂಡ ಪುತ್ತೂರು ತಾಲೂಕಿನ ಅವಿನಾಶ ಕೊಡಂಕಿರಿ, ನರಿಮೊಗ್ರು ಅವರು ಅರಣ್ಯ ಮಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪರಿಸರ ಸಂರಕ್ಷಣೆಯ ನೆಲೆಯಲ್ಲಿ ತನ್ನ ಜಮೀನಿನ 5 ಎಕ್ರೆ ಪ್ರದೇಶದಲ್ಲಿ 300 ವಿವಿಧ ಕಾಡು ಮಾವು ಗಿಡಗಳು, ಅಳಿವಿನಂಚಿನಲ್ಲಿರುವ ಕಾಡು ಹಣ್ಣುಗಳ ಗಿಡಗಳನ್ನು ಬೆಳೆಸಿ ಮಾನವ ಹಸ್ತಕ್ಷೇಪ ಇಲ್ಲದ ರೀತಿಯಲ್ಲಿ ಕಾಡನ್ನು ಕಾಪಾಡಿ ಪ್ರಾಣಿ, ಪಕ್ಷಿಗಳಿಗೆ ಆಹಾರವನ್ನು ಒದಗಿಸುವ ಹಣ್ಣು-ಹಂಪಲುಗಳ ಬೀಜಗಳನ್ನು ಬಿತ್ತಿ, ಗಿಡಗಳನ್ನು ಪೋಷಿಸಿ ಕಾಡನ್ನು ಬೆಳೆಸಿರುವುದರ ಜತೆಗೆ  ವೃತ್ತಿಯಲ್ಲಿ ಸಂಸ್ಕೃತ ಮತ್ತು ಇಂಗ್ಲಿಷ್ ಪ್ರಾಧ್ಯಾಪಕರಾಗಿ, ತಾಳಮದ್ದಲೆ ಅರ್ಥಧಾರಿ, ಧಾರ್ಮಿಕ ಉಪನ್ಯಾಸಕ, ಬರಹಗಾರಾಗಿರುವ ಅವಿನಾಶ್ ಕೊಡಂಕಿರಿ ಅವರಿಗೆ ಈ ಪ್ರಶಸ್ತಿ ಒಲಿದಿದೆ.

ಜು2 ರಂದು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಆಲಂಪುರಿ, ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ದಶಲಕ್ಷ ಹಣ್ಣಿನ ಗಿಡಗಳ ನಾಟಿ ಕಾರ್ಯಕ್ರಮದಲ್ಲಿ ‘ಅರಣ್ಯ ಮಿತ್ರ’ ಪ್ರಶಸ್ತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಕರ್ನಾಟಕ ಸರಕಾರದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ, ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ, ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಮತ್ತು ಮಂಗಳೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳ ಉಪಸ್ಥಿತಿಯಲ್ಲಿ ನೀಡಿ ಗೌರವಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top