ಲಿಫ್ಟ್ ನೊಳಗೆ ಸಿಲುಕಿದ ವಿದ್ಯಾರ್ಥಿಗಳು : ಸ್ಥಳೀಯರಿಂದ  ರಕ್ಷಣೆ

ವಿಟ್ಲ : ಸ್ವಿಫ್ಟ್ ಸ್ಪೇಸ್ ಎಲಿವೇಟರ್ ನಲ್ಲಿ ವಿದ್ಯಾರ್ಥಿಗಳು ಬಾಗಿಲು ಓಪನೆ ಆಗದೆ ಲಿಫ್ಟ್ ನೊಳಗೆ ಸಿಲುಕಿದ ಘಟನೆ ವಿಟ್ಲ ಪುತ್ತೂರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ನಡೆದಿದೆ.

ವಿಟ್ಲ ಪುತ್ತೂರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಲಿಫ್ಟ್ ನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿಗಳು, ಎಷ್ಟು ಹೊತ್ತಾದರೂ ಲಿಫ್ಟ್ ನ ಬಾಗಿಲು ತೆರೆಯದೇ ಅದರ ಒಳಗೆ ಸಿಲುಕಿದ್ದರು. ಈ ವೇಳೆ ವಿದ್ಯಾರ್ಥಿಗಳಲ್ಲಿ ಉಸಿರಾಟದ ತೊಂದರೆ ಕಂಡುಬಂದಿದ್ದು, ಕೂಡಲೇ ವಿದ್ಯಾರ್ಥಿಗಳು ತಮ್ಮ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿ ಲಿಫ್ಟ್ ಬಾಗಿಲಿಗೆ ರಾಡ್ ಹಾಕಿ ಮೀಟಿ ಬಾಗಿಲು ತೆಗೆದು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಿದೆ.

ಈ ಹಿಂದೆ ಕೂಡ ಮಂಗಳೂರಿನ ಕೂಳೂರಿನಲ್ಲಿ ಸ್ವಿಫ್ಟ್ ಸ್ಪೇಸ್ ಸಂಸ್ಥೆಯ ಲಿಫ್ಟ್ ನ ಚೈನ್ ಪುಲ್ಲಿ ತುಂಡಾಗಿ ಬಿದ್ದು ಕಾರ್ಮಿಕರಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿತ್ತು. ಇದೀಗ ಅದೇ ಸ್ವಿಫ್ಟ್ ಸ್ಪೇಸ್ ಸಂಸ್ಥೆಯ ತಾಂತ್ರಿಕ ದೋಷದಿಂದ ಲಿಫ್ಟ್ ನಲ್ಲಿ ವಿದ್ಯಾರ್ಥಿಗಳು ಸಿಲುಕಿ ಸ್ಥಳೀಯರ ರಕ್ಷಣೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top