ಟಿ20 ವಿಶ್ವಕಪ್ ಕ್ರಿಕೇಟ್ | 17 ವರ್ಷಗಳ ಬಳಿಕ ಕಪ್ ಮುಡಿಗೇರಿಸಿಕೊಂಡ ಭಾರತ

ಕೊನೆಗೂ 17 ವರ್ಷಗಳ ಬಳಿಕ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಪ್ರಬಲ ಪೈಪೋಟಿಯ ನಡುವೆಯೂ ಭಾರತ ಟಿ20 ವರ್ಲ್ಡ್ ಕಪ್ ನಲ್ಲಿ ಗೆಲುವು ಸಾಧಿಸಿ t20 world cup ಅನ್ನು ಭಾರತ ತನ್ನ ಮುಡಿಗೇರಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ, ರೋಹಿತ್ ಶರ್ಮಾ ನಾಯಕತ್ವದಲ್ಲಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದ ಭಾರತ, ಎದುರಾಳಿ ದಕ್ಷಿಣ ಆಫ್ರಿಕಾಕ್ಕೆ 177 ರನ್ ಗಳ ಗುರಿ ನೀಡಿತು. ಇದನ್ನು ಗಳಿಸುವಲ್ಲಿ ವಿಫಲವಾದ ದಕ್ಷಿಣ ಆಫ್ರಿಕಾ ಆಟಗಾರರು 8 ವಿಕೆಟ್ ನಷ್ಟದೊಂದಿಗೆ 169 ರನ್ ಮಾತ್ರ ಪಡೆಯಲು ಶಕ್ತರಾದರು. ಈ ಮೂಲಕ ವಿಜಯಮಾಲೆ ಭಾರತದ ಕೊರಳಿಗೆ ತೊಡಿಸಲ್ಪಟ್ಟಿತು.

ವಿರಾಟ್ ಕೊಹ್ಲಿ 76, ಅಕ್ಷರ್ ಪಟೇಲ್ 46, ಶಿವಂ ದುಬೆ 27 ರನ್ ಗಳಿಸಿ ತಂಡಕ್ಕೆ ಬಲ ನೀಡಿದರು. ಬೌಲರ್ ಗಳಾದ ಹಾರ್ದಿಕ್ ಪಾಂಡ್ಯ 3, ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷ ದೀಪ್ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು.































 
 

ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೂರ್ಯ ಕುಮಾರ್ ಯಾದವ್ ಹಿಡಿದ ಕ್ಯಾಚ್, ಪಂದ್ಯದ ಇಡೀಯ ಚಿತ್ರಣವನ್ನೇ ಬದಲಿಸಿತು. ಎದುರಾಳಿಗಳನ್ನು ಉತ್ತಮ ಎಸೆತಗಳ ಮೂಲಕ ಕಟ್ಟಿಹಾಕಿದ ಭಾರತ ತಂಡ 7 ರನ್ ಗಳಿಗೆ ಜಯ ದಾಖಲಿಸಿದರು.

ಪಂದ್ಯ ಗೆಲ್ಲುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಆನಂದಭಾಷ್ಪ ಸುರಿಸಿ ಸಂಭ್ರಮಿಸಿದ ದೃಶ್ಯ ಕ್ರೀಡಾಂಗಣದಲ್ಲಿ ಕಂಡುಬಂದಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top