ತನ್ನ ಸಣ್ಣ ವಯಸ್ಸಿನಲ್ಲಿಯೇ ಕಲೆಯ ಮೇಲೆ ಆಸಕ್ತಿಯನ್ನು ಇಟ್ಟುಕೊಂಡು ಸಾಧನೆಯ ಎರೆಮರೆಯಲ್ಲಿ ಉಳಿದಿರುವ ಯುವ ಕಲಾವಿದೆ ಗೌತಮಿ ಕಲ್ವಾರ್. ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕಲ್ವಾರ್ ನವರು.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಪ್ರಾಥಮಿಕ ಶಾಲೆ ಪಂಬೆತ್ತಾಡಿ, ಪ್ರೌಢ ಶಿಕ್ಷಣವನ್ನು ಎಣ್ಮೂರು, ಪದವಿ ಪೂರ್ವ ಶಿಕ್ಷಣ ಪಂಜದಲ್ಲಿ ಪೂರೈಸಿ, ಈಗ ಪದವಿ ಶಿಕ್ಷಣವನ್ನು ಮಂಗಳೂರು ಮಹಲಸ ಕಾಲೇಜ್ ಆಫ್ ಆರ್ಟ್ ನಲ್ಲಿ ಪಡೆಯುತ್ತಿದ್ದಾರೆ.
ಇವರ ಚಿತ್ರಕಲಾ ಆಸಕ್ತಿಯನ್ನು ಗುರುತಿಸಿದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕ ಮೋಹನ್ ಗೌಡ ಇವರು ಹೆಚ್ಚಿನ ಪ್ರೋತ್ಸಾಹ ನೀಡಿ, ಕಲೆಯೇ ಜೀವನ ಎಂದು ತಿಳಿಸಿದ್ದರು.
ಮೋಹನ್ ಸರ್ ಮತ್ತು ಮನೆಯವರ ಪ್ರೋತ್ಸಾಹದ ಮೇರೆಗೆ ಮಹಲಾಸ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಡರು.
“8 ನೇ ತರಗತಿಯಿಂದ 10 ನೇ ತರಗತಿವರೆಗೂ ನನ್ನ ಚಿತ್ರ ಕಲೆ ಸ್ಪರ್ಧೆಗೆ ಏನೆಲ್ಲಾ ತಯಾರಿ ಬೇಕೋ ಅದನ್ನೆಲ್ಲಾ ಹೇಳಿಕೊಟ್ಟು ಸ್ಪರ್ಧೆಗೆ ಕರೆದುಕೊಂಡು ಹೋಗಿ, ಸರ್ಧೆ ಮುಗಿಯುವರೆಗೆ ಜೊತೆಗೆ ಇದ್ದು ಮರಳಿ ಕರೆದುಕೊಂಡು ಬರುತ್ತಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಬಹುಮಾನ ಸಿಗುವುದು ಬಿಡುವುದು ನಂತರದ ವಿಷಯ ಎಂದು ಸರ್ ಪ್ರೋತ್ಸಾಹಿಸುತ್ತಿದ್ದರು” ಎಂದು ಗೌತಮಿಯವರು ಹೇಳುತ್ತಾರೆ. ಹೀಗೆ ನಾನಾ ರೀತಿಯ ಚಿತ್ರ ಕಲೆಗಳನ್ನುಬಿಡಿಸಿ ಅವುಗಳಿಗೆ ಬಣ್ಣ ತುಂಬಿಸುತ್ತಿರುವವರು. ಬಳಿದು ಜೀವ ಪ್ರಾಥಮಿಕ ಶಾಲೆ ಎಣ್ಣೆಮಜಲು ಬಳ್ಪ, ಪ್ರಾಥಮಿಕ ಶಾಲೆ ಕಲ್ಮಡ್ಕ ಹೀಗೆ ಕೆಲವು ಸರಕಾರಿ ಶಾಲೆಗಳ ಗೋಡೆಗಳಲ್ಲಿ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ಯಕ್ಷಗಾನವೂ ಇವರ ಇಷ್ಟದ ಕಲೆ. ಬ್ರಹ್ಮ, ಬಲರಾಮ ನಾನಾ ತರದ ಬಣ್ಣದ ವೇಷಗಳಲ್ಲಿ ರಾರಾಜಿಸಿದ್ದಾರೆ. ಇವರು ನಾರಾಯಣ ಗೌಡ ಹಾಗೂ ಹೇಮಲತಾ ದಂಪತಿಗಳ ಪುತ್ರಿ.
ಪ್ರತಿಭಾ ಪುರಸ್ಕಾರಗಳು:
ಇವರ ಪ್ರತಿಭೆಯನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿ, ಅಭಿನಂದಿಸಿದ್ದಾರೆ. ಜ್ಞಾನ ದೀಪ ಎಲಿಮಲೆಯಲ್ಲಿ ಸನ್ಮಾನಿಸಿದ್ದಾರೆ. ಹೀಗೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮತ್ತು ಇವರ ಸಾಧನೆಯನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿರುತ್ತಾರೆ.
ಜಯಶ್ರೀ.ಸಂಪ
ಪಂಜ