ಸಂತ ಫಿಲೋಮಿನಾ ಕಾಲೇಜಿನಲ್ಲಿ ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಕಾರ್ಯಕ್ರಮ

ಪುತ್ತೂರು: ಸಿಬ್ಬಂದಿಗಳು ಸಂಸ್ಥೆಯ ಅಭಿವೃದ್ಧಿ ಹಾಗೂ ಅಭ್ಯುದಯವನ್ನೇ ಗುರಿಯಾಗಿಸಿ ಒಮ್ಮತದಿಂದ ಕರ್ತವ್ಯ ನಿಭಾಯಿಸಿದಲ್ಲಿ ಯಶಸ್ಸು ನಿಶ್ಚಿತ. ಪ್ರತಿಯೋರ್ವ ವ್ಯಕ್ತಿಯೂ ಬದಲಾವಣೆಗೆ ಧನಾತ್ಮಕವಾಗಿ ಸ್ಪಂದಿಸಿದಲ್ಲಿ ಪವಾಡಗಳನ್ನು ಸೃಷ್ಠಿಮಾಡಬಹುದು. ನಮ್ಮಲ್ಲಿ ಆತ್ಮವಿಶ್ವಾಸವಿದ್ದಲ್ಲಿ ನಾವು ಒಳ್ಳೆಯ ವಿಷಯಗಳೆಡೆಗೆ ಮಾತ್ರವೇ ಚಿಂತನೆ ನಡೆಸುವಂತಾಗುತ್ತದೆ. ನಮ್ಮನ್ನು ನಾವು ಪ್ರಶಂಸಿಸಲು ಕಲಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಮ್ಮನ್ನು ನಾವು ಕೆಳಕ್ಕೆ ತಳ್ಳಬಾರದು. ಧನಾತ್ಮಕವಾಗಿ ಚಿಂತಿಸಿ, ತಂಡವಾಗಿ ಕಾರ್ಯಪ್ರವೃತ್ತರಾದಲ್ಲಿ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ವಂ. ಡಾ. ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಸ್ಟಾಫ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಅಪ್ರೈಸಲ್‌ ಸೆಲ್ ನ ಆಶ್ರಯದಲ್ಲಿ “ಅಂಗ ಸಂಸ್ಥೆಯಿಂದ ಸ್ವಾಯತ್ತ ಸಂಸ್ಥೆಯಾಗಿ ಪರಿವರ್ತನೆಗೆ ತಯಾರಿ” ಎಂಬ ಒಂದು ದಿನದ ಫ್ಯಾಕಲ್ಟಿ ಡೆವಲಪ್‌ಮೆಂಟ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರು.

ಕಳೆದ ನವಂಬರ್‌ನಿಂದ ಮಾರ್ಚ್‌ ತಿಂಗಳುಗಳು ಕಾಲೇಜಿಗೆ ಸಂಬಂಧಿಸಿದಂತೆ ಅತ್ಯಂತ ಮಹತ್ವಪೂರ್ಣ ಹಾಗೂ ಸವಾಲಿನ ದಿನಗಳಾಗಿದ್ದವು. ಏಕಕಾಲಕ್ಕೆ ಕಾಲೇಜು ಎಐಸಿಟಿಇ ಅಫಿಲಿಯೇಶನ್‌, ಐಎಸ್‌ಒ 9001:2015 ಪ್ರಮಾಣೀಕರಣ, ಸ್ವಾಯತ್ತತೆಗಾಗಿ ದಾಖಲೆಗಳನ್ನು ಹೊಂದಿಸುವುದೇ ಮುಂತಾದ ಸವಾಲುಗಳನ್ನು ಸಮರ್ಪಕವಾಗಿ ಎದುರಿಸಿದುದರಿಂದ ಇಂದು ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.



































 
 

ಕಾಲೇಜಿನ ಐಕ್ಯುಎಸಿ ಸಂಯೋಜಕಿ ಡಾ. ಮಾಲಿನಿ ಕೆ, ಸ್ವಾಯತ್ತತೆಯ ಮಹತ್ವ, ನ್ಯಾಕ್ ನ ಸ್ವಾಯತ್ತತೆಯ ಕೈಪಿಡಿಯಲ್ಲಿನ ವಿವಿಧ ಅಂಶಗಳ ಕುರಿತು ವಿವರಣೆ ನೀಡಿದರು.

ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ ಸ್ವಾಯತ್ತತೆಯ ಮುಖ್ಯ ಲಕ್ಷಣಗಳು, ಸ್ವಾಯತ್ತತೆಯ ಪ್ರಯೋಜನಗಳು ಸ್ವಾಯತ್ತ ಕಾಲೇಜುಗಳನ್ನು ನಿಯಂತ್ರಿಸುವ ನಿಯಮಗಳು, ಸ್ವಾಯತ್ತ ಕಾಲೇಜುಗಳ ಆಡಳಿತ ವ್ಯವಸ್ಥೆಯ ರೂಪುರೇಷೆಗಳು, ಸ್ವಾಯತ್ತ ಸಂಸ್ಥೆಗಳ ಹಕ್ಕುಗಳು ಮತ್ತು ಸವಲತ್ತುಗಳು ಸ್ವಾಯತ್ತ ಕಾಲೇಜುಗಳ ಪರಿಶೀಲನೆ ಮತ್ತು ಮೌಲ್ಯಮಾಪನ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಪೂಜಾಶ್ರೀ ಮತ್ತು ಲಾವಣ್ಯ ಪ್ರಾರ್ಥಿಸಿದರು. ಸ್ಟಾಫ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಅಪ್ರೈಸಲ್‌ ಸೆಲ್ ನ ಸಂಯೋಜಕ ಡಾ| ಎಡ್ವಿನ್‌ ಡಿಸೋಜ ಸ್ವಾಗತಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಸುರಕ್ಷಾ ಎಸ್. ವಂದಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ| ವಿಜಯ ಕುಮಾರ್‌ ಮೊಳೆಯಾರ್‌ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top