ಸುಬ್ರಹ್ಮಣ್ಯ: ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ಪವಿತ್ರ ಕುಮಾರಧಾರ ನದಿ ತುಂಬಿ ಹರಿಯುವ ಮೂಲಕ ಸ್ನಾನಘಟ್ಟ ಮುಳುಗಡೆಯಾಗಿದೆ.
ಕುಮಾರಧಾರ ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆ ಯಾಗಿದ್ದು, ಭಕ್ತಾದಿಗಳಿಗೆ ನದಿಗಿಳಿಯದಂತೆ ಸೂಚನೆ ನೀಡಲಾಗಿದೆ. ಇದೀಗ ನದಿ ದಡ ದಲ್ಲೇ ಭಕ್ತಾದಿಗಳು ತೀರ್ಥಸ್ನಾನ ಮಾಡುತಿದ್ದಾರೆ. ಕುಮಾರಧಾರ ಉಪನದಿ ದರ್ಪಣ ತೀರ್ಥ ಕೂಡ ಮಳೆನೀರಿನಿಂದ ತುಂಬಿ ಹರಿಯುತ್ತಿದೆ.
ಕುಮಾರಧಾರ ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿಗಳು, ಹೋಮ್ ಗಾರ್ಡ್ಸ್ ಗಳನ್ನು ನಿಯೋಜನೆ ಮಾಡಲಾಗಿದೆ.