ಉಬರಡ್ಕ: ಉಬರಡ್ಕ ಗ್ರಾಮ ಪಂಚಾಯತ್ ಕೋಡಿಯಡ್ಕ ಕಾಲನಿ ಸಮೀಪ ಮಣ್ಣಿನ ಕುಸಿತ ಉಂಟಾಗಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆ ಇದೆ. ಇದರಿಂದಾಗಿ 4-5 ಮನೆಗಳಿಗೆ ಅಪಾಯದ ಸ್ಥಿತಿ ಉಂಟಾಗಿದೆ.
ಇಲ್ಲಿ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದ್ದು, ಪಂಚಾಯತ್ ವತಿಯಿಂದ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ.
ಹಾಗೆಯೇ ಇನ್ನಷ್ಟು ಕಡೆ ಪ್ಲಾಸ್ಟಿಕ್ ಹೊದಿಕೆ ಹಾಕಬೇಕಾದ ಅಗತ್ಯತೆ ಇದೆ ಎಂದು ಗ್ರಾ.ಪಂ.ಸದಸ್ಯ ಹರೀಶ್ ರೈ ಉಬರಡ್ಕ ಹೇಳಿದ್ದಾರೆ.