ಪುತ್ತೂರು: ಶಾಲಾ ಜೀವನದಲ್ಲಿಯೇ ಮಕ್ಕಳಿಗೆ ಚುನಾವಣಾ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ಚುನಾವಣೆಯ ಮೂಲಕ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ಆಕಾಶ್ ಪ್ರಭು, ಉಪನಾಯಕಿಯಾಗಿ 9 ನೇ ತರಗತಿಯ ಸುಪ್ರಜಾ ರಾವ್ ಆಯ್ಕೆಯಾದರು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ನಾಯಕನಾಗಿ 7ನೇ ತರಗತಿಯ ಸಾಕ್ಷಿನ್ ಆರ್.ರೈ, ಉಪನಾಯಕನಾಗಿ 6 ನೇ ತರಗತಿಯ ಸ್ಕಂದನ್ ಎಸ್. ಆಯ್ಕೆಯಾದರು. ಸಭಾಪತಿಯಾಗಿ ವರ್ಣಾ.ಕೆ, ಪ್ರತಿಪಕ್ಷ ನಾಯಕರಾಗಿ ಸಾರ್ಥಕ್, ಗೃಹ ಸಚಿವರಾಗಿ ಯಶಸ್, ಶಮನ್, ಶಿಕ್ಷಣ ಸಚಿವರಾಗಿ ಲಿಕೀತನ್, ಗಣೇಶ್ ಪಟೇಲ್, ಹಣಕಾಸು ಸಚಿವರಾಗಿ ವಿಕಾಸ್, ಚಂದನ್, ಆರೋಗ್ಯ ಸಚಿವರಾಗಿ ನಿಖಿಲ್, ದೈವಿಕ್, ಕ್ರೀಡಾ ಸಚಿವರಾಗಿ ಮನ್ವಿತ್, ಚಿಂತನಾ, ಸಾಂಸ್ಕೃತಿಕ ಸಚಿವರಾಗಿ ಕೃತಿ, ಅಭಿನವ್, ನೀರಾವರಿ ಸಚಿವರಾಗಿ ನಂದಕಿಶೋರ್, ಅಭಿಷೇಕ್, ಆಹಾರ ಸಚಿವರಾಗಿ ಶಾನ್ವಿ, ಆರಾಧನ್, ಪ್ರಸಾರಖಾತೆ ಸಚಿವರಾಗಿ ಚಿನ್ಮಯಿ, ಅವನಿ. ಎಸ್. ರೈ ; ದಾಖಲೆ ನಿರ್ವಾಹಕರಾಗಿ ದೇಶಿಕ್ ಆಯ್ಕೆಯಾದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಸತೀಶ್ ಕುಮಾರ್ ರೈ ಮಾರ್ಗದರ್ಶನದಲ್ಲಿ ಸಹಶಿಕ್ಷಕರಾದ ಭಾಸ್ಕರ ಗೌಡ, ರಾಧಾಕೃಷ್ಣ ರೈ ನೇತೃತ್ವದಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತದಾನ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಶಾಲಾ ಶಿಕ್ಷಕ ವೃಂದ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.