ಕಡಬ: ತಾಲೂಕಿನ ಹೊಸಮಠದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಒಕ್ಕಲಿಗ ಗೌಡ ಸಮುದಾಯ ಭವನಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಸಂಜೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಸಮುದಾಯ ಭವನದ ಕುರಿತು ಮಾಹಿತಿ ನೀಡಿ ಮುಂದಿನ ಅಭಿವೃದ್ಧಿಗಾಗಿ ಸಹಕಾರ ಕೋರಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಸರಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷರಾದ ತಮ್ಮಯ್ಯ ಗೌಡ ಸುಳ್ಯ, ಹಿರಿಯಣ್ಣ ಗೌಡ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಸ್ಪಂದನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಗೌಡ ಅಮೈ ಕಲಾಯಿಗುತ್ತು, ಹಿರಿಯಣ್ಣ ಗೌಡ ಅಮೈ, ನಿರ್ದೇಶಕರುಗಳಾದ ಚಂದ್ರಶೇಖರ ಕೋಡಿಬೈಲು, ವೆಂಕಟ್ರಮಣ ಗೌಡ ಪಾಂಗ, ಗಣೇಶ್ ಕೈಕುರೆ, ಪ್ರವೀಣ್ ಕುಂಟ್ಯಾನ, ವಿಶ್ವನಾಥ ಗೌಡ ಅಂಬುಲ, ನೀಲಾವತಿ ಶಿವರಾಮ್, ಬಾಲಕೃಷ್ಣ ಗೌಡ ಕೋಲ್ಪೆ, ತಿಮ್ಮಪ್ಪ ಗೌಡ ಕುಂಡಡ್ಕ, ರಾಧಾಕೃಷ್ಣ ಗೌಡ ಕೇರ್ನಡ್ಕ, ಮೋಹನ್ ಕೋಡಿಂಬಾಳ, ವೆಂಕಟ್ರಾಜ್ ಕೋಡಿಬೈಲು, ದಯಾನಂದ ಆಲಡ್ಕ, ಸರ್ವೋತ್ತಮ ಗೌಡ ಪಂಜೋಡಿ, ಗೋಪಾಲ ಗೌಡ ಎಣ್ಣೆಮಜಲು, ಮಹಿಳಾ ಸಂಘದ ಅಧ್ಯಕ್ಷೆ ವೀಣಾ ಕೊಲ್ಲೆಸಾಗು, ಕಾರ್ಯದರ್ಶಿ ಲಾವಣ್ಯ ಹೇಮಂತ್, , ನಿತ್ಯಾನಂದ ಮುಂಡೋಡಿ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಧನಂಜಯ ಅಡ್ಪಂಗಾಯ, ಕುಶಾಲಪ್ಪ ಗೌಡ ಅನಿಲ, ವಾಸುದೇವ ಕೋಲ್ಪೆ, ಗಣೇಶ್ ಕೈಕುರೆ, ಬಾಲಕೃಷ್ಣ ಗೌಡ ಕೋಲ್ಪೆ, ಸುಬ್ರಹ್ಮಣ್ಯ ಗೌಡ ಎರ್ಮಾಲ, , ವೆಂಕಪ್ಪ ಗೌಡ ಸುಳ್ಯ, ನಾಗೇಶ್ ಕುಮಾರ್ ಬೆಳ್ತಂಗಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ,, ಕೆಪಿಸಿಸಿ ಸದಸ್ಯ ಜಿ,ಕೃಷ್ಣಪ್ಪ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಿರಣ್ ಬುಡ್ಲೆಗುತ್ತು, ಕಿರಣ್ ಹೊಸೊಳಿಕೆ, ಅಶೋಕ್ ಗೌಡ ಶೇಡಿ, ನಾಗೇಶ್ ಗೌಡ ಕೋಡಿಂಬಾಳ, ತಾಲೂಕು ಯುವ ಸಮಿತಿ ಅಧ್ಯಕ್ಷ ಪೂರ್ಣೇಶ್ ಗೌಡ ಬಲ್ಯ, ಸಮುದಾಯದ ಪ್ರಮುಖರಾದ ಪಿ.ಪಿ.ವರ್ಗೀಸ್, ಮೀರಾ ಸಾಹೇಬ್, ಗಣ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.