ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯಲ್ಲಿ ‘ಪಾಂಡವ ವನಗಮನ’ ತಾಳ ಮದ್ದಳೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್ ಮತ್ತು ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು.
ಅರ್ಥಧಾರಿಗಳಾಗಿ ಸತೀಶ ಆಚಾರ್ಯ ಮಾಣಿ (ಕೌರವ), ದಿವಾಕರ ಆಚಾರ್ಯ ಗೇರುಕಟ್ಟೆ (ದ್ರೌಪದಿ, ಅರ್ಜುನ), ಜಯರಾಮ ಬಲ್ಯ (ಭೀಮ), ಸಂಜೀವ ಪಾರೆಂಕಿ (ಭೀಷ್ಮ ಮತ್ತು ನಕುಲ), ದಿವಾಕರ ಆಚಾರ್ಯ ನೇರೆಂಕಿ (ದೃತರಾಷ್ಟ್ರ), ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ (ಶಕುನಿ), ಜಯರಾಮ ನಾಲ್ಗುತ್ತು (ಧರ್ಮರಾಯ) ಭಾಗವಹಿಸಿದ್ದರು.