ನಂದಿಕೂರು ದೇವರಕಾಡು ನಾಶ ಪಡಿಸಿದ ಪ್ರದೇಶದಲ್ಲಿ ಜನ ವಿರೋಧಿಯಾಗಿ ಅಸ್ತಿತ್ವಕ್ಕೆ ಬರಲು ಹವಣಿಸುತ್ತಿರುವ ಎಂ ಇಲೆವೆನ್ ಕಂಪನಿಯ ಸಾಧಕ ಬಾಧಕಗಳನ್ನು ತಿಳಿಯಲು ಕಂಪನಿಗೆ ಮಾಜಿ ಸಚಿವರ ತಂಡದೊಂದಿಗೆ ಹೋಗಿದ್ದ ದಲಿತ ಮುಖಂಡರೊರ್ವರಿಗೆ ಕಂಪನಿಯ ಮಾಲಕ ಎನ್ನಲಾದ ವ್ಯಕ್ತಿ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದೆ.
ಸಾರ್ವಜನಿಕ ಸಭೆಯನ್ನು ನಡೆಸದೆ ಸ್ಥಳೀಯರಿಗೆ ಕಂಪನಿಯ ಸಾಧಕ ಬಾಧಕಗಳನ್ನು ತಿಳಿಸದೆ ಏಕಾಏಕಿ ತಲೆ ಎತ್ತಲು ಮುಂದಾಗಿರುವ ಬಯೋ ಡಿಸೇಲ್ ಉತ್ಪಾದನಾ ಕಂಪನಿ ಇದಾಗಿದ್ದು, ಇಲ್ಲಿ ಅಭದ್ರತೆ ಕಾಡುತ್ತಿದೆ. ಕಂಪನಿಯಿಂದ ಹೊರ ಬಿಡುವ ರಾಸಾಯನಿಕ ನೀರಿನಿಂದ ಸ್ಥಳೀಯರು ಅನುಭವಿಸುತ್ತಿರುವ ಕಷ್ಟ-ನಷ್ಟ ಸ್ಥಳೀಯರಿಗೆ ಉದ್ಯೋಗ ಅವಕಾಶ ತೀರ ಕಡಿಮೆ, ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಥಳೀಯರು ಮಾಜಿ ಸಚಿವರಲ್ಲಿ ದೂರಿದ್ದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸ್ಥಳಕ್ಕೆ ಬಂದ ತಂಡವನ್ನು ಒಳ ಬಿಡುವುದಕ್ಕೆ ಆರಂಭದಲ್ಲೇ ತಕರಾರು ಮಾಡಿ ಒಳ ಹೋಗುತ್ತಿದಂತೆ ಒಳ ಭಾಗದ ವೀಕ್ಷಣೆಗೆ ಮತ್ತೆ ತಡೆಯೊಡ್ಡಿದ್ದು ಆ ಸಂದರ್ಭ ಕಂಪನಿಯ ಮಾಲಿಕ ಎಂಬವರ ಆಕ್ಷೇಪನೆಯ ವಿರುದ್ಧ ಮಾತನಾಡಿದರು ದಲಿತ ಮುಖಂಡ ಶೇಖರ್ ಹೆಜಮಾಡಿಯವರ ಮೇಲೇರಿ ಬಂದ ಸಂದರ್ಭ ಪೊಲೀಸರು ಅವರನ್ನು ನಿಯಂತ್ರಿಸಿ ಒಳ ಕಳುಹಿಸಿದ್ದಾರೆ.
ಜೋಶ್ ನಲ್ಲೇ ಮಾಜಿ ಸಚಿವರ ತಂಡ ಒಳ ಹೋಗಿ ಎಲ್ಲಾ ವೀಕ್ಷಣೆ ಮಾಡಿದ್ದು, ಈ ಸಂದರ್ಭ ಸ್ಥಳೀಯ ಕೆಲ ಮುಖಂಡರು ಜನರ ಗಂಭೀರ ಸಮಸ್ಯೆಗಳನ್ನು ತಿಳಿಸಿ ಕಂಪನಿಯ ಪ್ರಮುಖರಲ್ಲಿ ಉತ್ತರ ಪಡೆಯಲು ಯತ್ನಿಸಿದ ರಾದರೂ ಅದಕ್ಕೂ ಅವಕಾಶ ನೀಡದಂತೆ ಮಾಜಿ ಸಚಿವ ಮತ್ತೊಮ್ಮೆ ಬಂದಾಗ ಈ ಬಗ್ಗೆ ಚರ್ಚಿಸೋಣ ಎನ್ನುವ ಮೂಲಕ ಬಂದ ಉದ್ಧೇಶ ಏನೆಂಬುದು ತಂಡದಲ್ಲಿದವರಿಗೂ ಅರ್ಥವಾಗಿಲ್ಲ ಎಂಬ ಗುಸುಗುಸು ತಂಡದ ಸದಸ್ಯರಲ್ಲಿತ್ತು. ಒಟ್ಟಾರೆಯಾಗಿ ಯಾವುದೇ ಯೋಜನೆಯ- ಯೋಚನೆಗಳನ್ನು ಹಾಕಿಕೊಳ್ಳದೆ ಆದ ಭೇಟಿ ಕಾರ್ಯಕ್ರಮ ಬೆಟ್ಟ ಅಗೆದು ಇಲಿ ಹಿಡಿದರು ಎಂಬಂತ್ತಾಗಿದೆ.
ಅಂತಿಮವಾಗಿ ಮಾದ್ಯಮದೊಂದಿಗೆ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ , ಸಾರ್ವಜನಿಕ ಮಾಹಿತಿ ಸಭೆ ನಡೆಸದೆ ಕಂಪನಿ ಅಸ್ಥಿತ್ವಕ್ಕೆ ಮುಂದಾಗಿದೆ, ಕೆಲ ದಿನಗಳ ಹಿಂದೆ ಆದ ಬೆಂಕಿ ಅನಾಹುತ ಸ್ಥಳೀಯರನ್ನು ಆತಂಕಕ್ಕೆ ತಳ್ಳಿದೆ, ಕಂಪನಿಗೆ ಬೇಕಾದ ನೀರಿನ ವ್ಯವಸ್ಥೆಯೂ ಇಲ್ಲ ಅದನ್ನು ಪಡೆಯುವ ವಿಧದ ಬಗ್ಗೆ ನಮ್ಮ ವಿರೋಧ ವಿದೆ, ದೇವರ ಕಾಡು ಉಳಿಸುವ ಸಂಕಲ್ಪವೂ ನಮಗಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಬೇಕು ಒಟ್ಟರೆಯಾಗಿ ನೆಲ- ಜಲ ಕಳೆದುಕೊಂಡ ಗ್ರಾಮಸ್ಥರಿಗೆ ಕಂಪನಿ ಪೂರಕವಾಗಿರ ಬೇಕೇ ವಿನಃ ಮಾರಕವಾಗಿರಬಾರದೆಂದರು.
ಅವರೊಂದಿಗೆ ಪಕ್ಷದ ಮುಖಂಡರಾದ ನವೀನ್ ಚಂದ್ರ ಸುವರ್ಣ, ಶಿವಾಜಿ ಸುವರ್ಣ, ಗಣೇಶ್ ಕೋಟ್ಯಾನ್, ದಿನೇಶ್ ಕೋಟ್ಯಾನ್, ಶೇಖರ್ ಹೆಜಮಾಡಿ, ನವೀನ್ ಚಂದ್ರ ಶೆಟ್ಟಿ, ನವೀನ್ ಶೆಟ್ಟಿ, ಯಶವಂತ್ ಪಲಿಮಾರು, ಡೇವಿಡ್ ಡಿಸೋಜ, ಶಫಿ, ಅಶ್ವಿನಿ, ಅಶೋಕ್ ನಾಯರಿ, ಸುಕುಮಾರ್ ವೈ, ಅಶೋಕ್ ಸಾಲ್ಯಾನ್, ಸುಭಾಷ್ ಸಾಲ್ಯಾನ್, ಕೇಶವ ಸಾಲ್ಯಾನ್, ಸರ್ಫುದ್ದೀನ್ ಶೇಖ್, ಸುನೀಲ್ ಬಂಗೇರ, ಜ್ಯೋತಿ ಮೆನನ್, ದೀಪಕ್ ನಡಿಕುದ್ರು, ಸನ ಹಿಬ್ರಾಹಿಂ ಮುಂತಾದವರಿದ್ದರು.