ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆ ಇಂದು ಹಸಿರು ಶಾಲೆಯಾದ ದಿನ. ಪ್ರತಿಯೊಂದು ಮಗುವಿನ, ಹಿರಿಯ ವಿದ್ಯಾರ್ಥಿಗಳ, ಪೋಷಕರ ಕೈಯಲ್ಲಿ ಒಂದೊಂದು ಗಿಡ ನೆಡುವ ಮೂಲಕ ಶಾಲೆಗೊಂದು ವನ ನಿರ್ಮಾಣ ಮಾಡಲಾಯಿತು.
ನೂರಾರು ಜಾತಿಯ ಹಣ್ಣಿನ ಗಿಡಗಳು ಜಂಬು ನೇರಳೆ, ಪೇರಳೆ, ನೇರಳೆ, ರಂಬ್ಟನ್,ಮಾವು,ಚಿಕ್ಕು ಹಲಸು, ನೆಲ್ಲಿ ಹೀಗೆ.. ನೂರಾರು ಜಾತಿಯ ಸಸಿಗಳು ಶ್ರೀಗಂಧ,ಕಕ್ಕೆ ಸಾಗುವಾನಿ. ಮಾಗುವನಿ ,ಹುಳಿ ಇತ್ಯಾದಿ.
ಒಂದು ಸಾವಿರಕ್ಕಿಂತಲೂ ಮಿಕ್ಕಿದ ವಿವಿಧ ಜಾತಿಯ ಹಣ್ಣಿನ ಗಿಡಗಳು ಮತ್ತು ಇತರೆ ಗಿಡಗಳನ್ನು ಕ್ರೆಂಚ್ ಮಾಡಿ ನೆಡಲಾಯಿತು.
ಮಿಯಾವಾಕಿ ಜಪಾನ್ ಕ್ರಮದಲ್ಲಿ ಶಾಲೆಗೊಂದು ವನ ಎಂಬ ವಿಶೇಷವಾದ ಕಲ್ಪನೆಯಲ್ಲಿ ವನ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖ ಜೀತ್ ಮಿಲನ್ ರೋಚ್ ಅವರ ನಿರ್ದೇಶನದಲ್ಲಿ ಮಹೇಶ್ ಕುಂಜೂರು ಪಂಜ ಅವರ ಸಂಯೋಜನೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವೀರಮಂಗಲ ಶಾಲಾ ಮುಖ್ಯ ಶಿಕ್ಷಕ ಗುರು ತಾರಾನಾಥ ಸವಣೂರು ಅವರ ಮಾರ್ಗದರ್ಶನದಲ್ಲಿ ಊರವರು ಪೋಷಕರು ಹಳೆ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಸುಮಾರು 250 ಕ್ಕಿಂತಲೂ ಹೆಚ್ಚಿನ ನಾಗರಿಕರು ಬಂದು ಏಕಕಾಲದಲ್ಲಿ ಶಾಲೆಗೊಂದು ವನ ನಿರ್ಮಾಣ ಮಾಡಿದರು. ನಮ್ಮ ಶಾಲೆ ನಮ್ಮ ವನದ ಸಂಪೂರ್ಣ ಖರ್ಚು ವೆಚ್ಚ ಮತ್ತು ಗಿಡಗಳ ಉಸ್ತುವಾರಿಯನ್ನು ಮಂಗಳೂರಿನ ವನ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು ವಹಿಸಲಿದೆ ಈ ಸಂದರ್ಭದಲ್ಲಿ ಟ್ರಸ್ಟ್ ಮುಖ್ಯಸ್ಥ ಜೀತ್ ಮಿಲನ್ ರೋಚ್ ಅವರನ್ನು ಶಾಲು ನೀಡಿ ಗೌರವಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಅನುಪಮ, ಶಾಲಾ ಮುಖ್ಯ ಶಿಕ್ಷಕರು ಅಭಿನಂದನೆಯನ್ನು ಸಲ್ಲಿಸಿದರು.