ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಕೇಂದ್ರ ಒಕ್ಕೂಟದ ಸಭೆ

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ವ್ಯಾಪ್ತಿಯ  ಕೇಂದ್ರ ಒಕ್ಕೂಟದ  ಸಭೆ ಬೊಳ್ವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯ್ ಕುಮಾರ್ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಯೋಜನಾಧಿಕಾರಿ ಶಶಿಧರ್ ಎಂ . ಸ್ವಾಗತಿಸಿ, ತಾಲೂಕಿನ 2023-24 ನೇ ಸಾಲಿನ ಆರ್ಥಿಕ ವರ್ಷದ ಸಾಧನಾ ವರದಿಯನ್ನು ಮಂಡಿಸಿದರು.

ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡ ಮಾತನಾಡಿ, ಶ್ರೀ ಕ್ಷೇತ್ರದ ಹಿನ್ನೆಲೆಯಲ್ಲಿ ಸೇವಕನಾಗಿ ಮುನ್ನುಡಿ ಹಾಕಿದ್ದು ಅಣ್ಣಪ್ಪ ಸ್ವಾಮಿ. ನಾವೆಲ್ಲ ಅದೇ ಅಣ್ಣಪ್ಪ ಸೇವಕನಾಗಿ ದೇವರ ಇಚ್ಛೆ ಯಂತೆ ಒಕ್ಕೂಟದ ಅಧ್ಯಕ್ಷರಾಗಿ  ಆಯ್ಕೆ ಆಗಿದ್ದೇವೆ. ಈ ಮೂಲಕ ನಾವು ಅಣ್ಣಪ್ಪನ ಸೇವಕರಾಗಿದ್ದೇವೆ. ಸೇವೆ ಮತ್ತು ಪರಿವರ್ತನೆಯ ಮಹತ್ವ, ಒಕ್ಕೂಟದ ಅರ್ಥ, ಒಕ್ಕೂಟದ ಬಲವರ್ಧನೆ, ಅಧ್ಯಕ್ಷರ ಹೊಣೆಗಾರಿಕೆ, ಮುಂತಾದ ಹಲವು ವಿಷಯಗಳ ಕುರಿತು ಮಾಹಿತಿ ನೀಡಿದರು.



































 
 

ಈ ಸಂದರ್ಭದಲ್ಲಿ 2023-24 ನೇ ಆರ್ಥಿಕ ವರ್ಷದಲ್ಲಿ ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿರುವ ತಾಲೂಕಿನ ಎಲ್ಲಾ ಒಕ್ಕೂಟಗಳ ಅಧ್ಯಕ್ಷರುಗಳನ್ನು ಗುರುತಿಸಿ ಗೌರವಿಸಲಾಯಿತು.

ದ.ಕ-2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ತಾಲೂಕಿನ ಎಲ್ಲಾ ಒಕ್ಕೂಟಗಳ ವಲಯಾಧ್ಯಕ್ಷರು,  ಅಧ್ಯಕ್ಷರು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕರಾದ ಸೋಹನ್ ವಂದಿಸಿದರು..

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top