ಮೋದಿ ಪ್ರೇರಣೆಯಿಂದ ಸಂಸದನಾಗಿದ್ದೇನೆ : ಕ್ಯಾ.ಬ್ರಿಜೇಶ್ ಚೌಟ | ಕಣ್ಣೀರು ಹಾಕದೇ ಧೃತಿಗೆಡದೆ ಸ್ವಂತ ಪರಿಶ್ರಮದಿಂದ ಬೆಳೆದವರು ಬಂಟರು : ಕೋಟಾ ಶ್ರೀನಿವಾಸ ಪೂಜಾರಿ | .ಎಂ. ಶೆಟ್ಟಿ ಒಡೆತನದ ವಿ.ಕೆ. ಗ್ರೂಫ್ ಆಫ್ ಕಂಪೆನೀಸ್ ಮುಂಬಯಿ ಪ್ರಾಯೋಜಕತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಸನ್ಮಾನ ಕಾರ್ಯಕ್ರಮ

ಮಂಗಳೂರು: ಕೆ.ಎಂ. ಶೆಟ್ಟಿ ಒಡೆತನದ ವಿ.ಕೆ. ಗ್ರೂಫ್ ಆಫ್ ಕಂಪೆನೀಸ್ ಮುಂಬಯಿ ಪ್ರಾಯೋಜಕತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಬೃಹತ್ ಕಾರ್ಯಕ್ರಮ ಮಂಗಳೂರು ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಸಾಮಾನ್ಯ ಮಧ್ಯಮ ವರ್ಗದಿಂದ ಬಂದ ನನ್ನನ್ನು ನನ್ನ ಸಮಾಜದ ಜೊತೆಗೆ ಪಕ್ಷ ಬೆಳೆಸಿ ಈ ಹಂತಕ್ಕೆ ಬಂದಿದ್ದೇನೆ ಅದರ ಜೊತೆಗೆ ಮೋದಿಯಿಂದ ಬಹುದೊಡ್ಡ ಬದಲಾವಣೆಯಿಂದಾಗಿದೆ ಅಲ್ಲದೇ ಬಾಲ್ಯದಿಂದಲೇ ದೇಶ ಸೇವೆ ಮಾಡುವ ಆಸೆ ಇತ್ತು ಅದರಂತೆ ಸೈನಿಕನಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ಒರ್ವ ಸಂಸದನಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಒಂಬತ್ತು ಯೋಜನೆಯ ಕಾರ್ಯಸೂಚಿಯನ್ವಯ ಮಾರ್ಗದರ್ಶಿ ಮಾದರಿ ಅಭಿವೃದ್ಧಿಯ ಜಿಲ್ಲೆಯನ್ನಾಗಿ ಮಾಡುತ್ತೇನೆ ಎಂದರು.

ಸನ್ಮಾನ ಸ್ವೀಕರಿಸಿ ಮಾತಾನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ ರಾಜ್ಯದ ಸಚಿವನಾಗಿ ಮೂರು ಬಾರಿ ಆಯ್ಕೆಯಾಗಿದ್ದೇನೆ ಆದರೆ ಆ ಮೂರು ಬಾರಿಯು ಯಾವುದೇ ಅನುದಾನಕ್ಕೆ ನನ್ನನ್ನು ಬೇಟಿಯಾಗದ ಸಮಾಜ ಇದ್ದರೆ ಅದು ಬಂಟ ಸಮಾಜ. ಉಳುವವನೇ ಹೊಳದೊಡೆಯ ಕಾನೂನಿನಲ್ಲಿ ಅತೀ ಹೆಚ್ಚು ಜಾಗ ಕಳೆದುಕೊಂಡವರು ಬಂಟರು ಆಗ ಕಣ್ಣೀರು ಹಾಕದೇ ಧೃತಿಗೆಡದೆ ಸ್ವಂತ ಪರಿಶ್ರಮದಿಂದ ಬೆಳೆದವರು ಬಂಟರು. ಹೊರ ದೇಶ ಹೊರ ರಾಜ್ಯದಲ್ಲಿ ಬಹುದೊಡ್ಡ ಹೋಟೆಲ್ ಅಥವಾ ಇನ್ನಾವುದೇ ಉದ್ಯಮ ಇದ್ದರೆ ಅದು ಸ್ವಾಭಿಮಾನದಿಂದ ಸ್ವಂತ ಬಲದಿಂದ ದುಡಿದು ಈ ಮಟ್ಟಕ್ಕೆ ಬಂದವರು ಬಂಟರು,ಉದ್ಯಮದಲ್ಲಿ ಮಾತ್ರವಲ್ಲದೇ ದೇಶ ರಕ್ಷಣೆಯ ವಿಷಯ ಬಂದಾಗಲೂ ಮುಂಚೂಣಿಯಲ್ಲಿದ್ದರೆ ನನ್ನ ಚುನಾವಣೆಯನ್ನು ಗೆಲ್ಲಿಸುವಲ್ಲಿ ಬಂಟರ ಸಮಾಜದ ಪಾತ್ರ ಬಹುಮುಖ್ಯ ಅವರಿಗೆ ಅಭಾರಿಯಾಗಿದ್ದೇನೆ ಎಂದು ಹೇಳಿದರು.































 
 

ಎಂ ಆರ್ ಜಿ ಗ್ರೂಫ್ ಚೇರ್ ಮ್ಯಾನ್ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಸಂಕಲ್ಪವನ್ನು ಮಾಡಿಕೊಂಡು 2018 ರಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಬಡತನದಲ್ಲೇ ಹುಟ್ಟಿ ಹಂತ ಹಂತವಾಗಿ ಮುಂದಕ್ಕೆ ಬಂದು ನಾನೀಗ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಇಂಥಹ ಅರ್ಥಪೂರ್ಣ ಕಾರ್ಯಕ್ರಮ ಮುಂದಕ್ಕೂ ನಡೆಯಬೇಕು ಎಂದರು.

ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪುರಸ್ಕೃತ ಗೊಲ್ಡ್ ಪಿಂಚ್ ಡಾ ಕೆ ಪ್ರಕಾಶ್ ಶೆಟ್ಟಿ, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿಗಳಾದ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಮದ್ಯಗುತ್ತು, ಲೆಫ್ಟಿನೆಂಟ್ ಸಾತ್ವಿಕ್ ರೈ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಐಕಳ ಹರೀಶ್ ಶೆಟ್ಟಿ, ಮಾಲಾಡಿ ಅಜಿತ್ ಕುಮಾರ್ ರೈ, ಡಾ ಎ ಸದಾನಂದ ಶೆಟ್ಟಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top