ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಜಯಮಾಲಾ ಮಾತನಾಡಿ, ಯೋಗವು ಮನುಷ್ಯನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿನಿತ್ಯ ಯೋಗ ಮಾಡುವ ಮೂಲಕ ಆರೋಗ್ಯ ವೃದ್ಧಿಸಬಹುದು ಎಂದು ಹೇಳಿದರು.

ಯೋಗ ಶಿಕ್ಷಕರುಗಳಾದ ನವೀನ್ ಕುಮಾರ್, ವೀಣಾ ವಿದ್ಯಾರ್ಥಿಗಳಿಗೆ ಯೋಗದ ವಿಶೇಷತೆಗಳನ್ನು ತಿಳಿಸಿ ಸಾಮೂಹಿಕ ಯೋಗಾಭ್ಯಾಸಗಳನ್ನು ನಡೆಸಿಕೊಟ್ಟರು.