ಪುತ್ತೂರು: 110/33/11 ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಲ್ಲಿ 110 ಕೆವಿ ಮತ್ತು 33 ಕೆವಿ ಲೈನ್ ನಲ್ಲಿ ಪಾಲನಾ ಕಾರ್ಯ ನಡೆಯುವುದರಿಂದ ಜೂ.25 ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು.
33 ಕೆವಿ ಮಾಡಾವು-ಬೆಳ್ಳಾರೆ, ಮಾಡಾವು-ಬೆಳ್ಳಾರೆ-ಗುತ್ತಿಗಾರು ಹಾಗೂ ಮಾಡಾವು-ಕಾವು-ಸುಳ್ಯ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ 110/33/11 ಕೆವಿ ಮಾಡಾವು ಹಾಗೂ 33/11 ಕೆವಿ ಸುಳ್ಯ, ಕಾವು, ಬೆಳ್ಳಾರೆ, ಗುತ್ತಿಗಾರು ಹಾಗೂ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜಾಗುವ ಬಳಕೆದಾರರು ಗಮನಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.