ಪುತ್ತೂರು : ಮನೆಯೊಂದರಲ್ಲಿ ಫ್ರಿಡ್ಜ್ ಸ್ಫೋಟಗೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದ ಘಟನೆ ಜಿಡೆಕಲ್ಲು ಕಾಲೇಜು ಸಮೀಪ ನಿನ್ನೆ ನಡೆದಿದ್ದು, ಘಟನಾ ಸ್ಥಳಕ್ಕೆ ಇಂದು ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ನಗರಸಭಾ ಆಯುಕ್ತರಿಗೆ ಕರೆ ಮಾಡಿ ಮನೆ ದೊರಕಿಸಿಕೊಡಬೇಕಾಗಿ ಮನವಿ ಮಾಡಿದ್ದಾರೆ.
ಜಿಡೆಕಲ್ಲು ಕಾಲೇಜು ಸಮೀಪದ ಮೋನಪ್ಪ ಎಂಬವರ ಮನೆಯಲ್ಲಿ ರೆಫ್ರಿಜರೇಟರ್ ಸ್ಫೋಟಗೊಂಡ ಹಿನ್ನೆಲೆ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಿಂದಾಗಿ ಮನೆಗೆ ಸಂಪೂರ್ಣ ಹಾನಿಯಾದ ಹಿನ್ನೆಲೆ ಆರ್ಥಿಕ ನೆರವು ನೀಡಿದ್ದಾರೆ.