ಪುತ್ತೂರು: ಶಿವಾಜಿ ಇಂದು ಸ್ವಶಕ್ತಿಯಿಂದ ಹಿಂದೂ ಸಾಮ್ರಾಜ್ಯಕ್ಕೆ, ಅಭೀಷಕ್ತನಾದ ದಿನವಾಗಿದ್ದು, ಶ್ರೇಷ್ಟ ಶುದ್ಧ ತ್ರಯೋದಶಿಯನ್ನು ರಾಷ್ಟ್ರಕ್ಕೆ ಪರ್ವದಿನವಾಗಿ, ಹಿಂದೂ ಸಾಮ್ರಾಜ್ಯ ದಿನೋತ್ಸವವಾಗಿ, ರಾಷ್ಟ್ರಜಾಗರಣ ಮಹೋತ್ಸವವಾಗಿ ಆಚರಿಸಲಾಗುತ್ತದೆ ಎಂದು ವಿದ್ಯಾಭಾರತಿ ಜಿಲ್ಲಾ ಯೋಗ ಶಿಕ್ಷಣ ಸಂಯೋಜಕ ಚಂದ್ರಶೇಖರ ದೇಲಂಪಾಡಿ ಹೇಳಿದರು.
ಅವರು ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಹಿಂದೂ ಸಾಮ್ರಾಜ್ಯ ದಿವಸ್ ಆಚರಣೆಯ ಕಾರ್‍ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಸ್ವಾಗತಿಸಿ ಮಾತನಾಡಿ, ಶಿವಾಜಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಮರ್ಥರಾಗಬೇಕು ಎಂದು ಹೇಳಿದರು.
ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳೂ ಭಾಗವಹಿಸಿದ್ದರು .