ಆರೋಗ್ಯ ಅಧಿಕಾರಿಯ ಮೃತದೇಹ ಶೌಚಾಲಯದಲ್ಲಿ ಪತ್ತೆ !

ಮಂಜೇಶ್ವರ: ಆರೋಗ್ಯ ಅಧಿಕಾರಿಯೊಬ್ಬರ ಮೃತದೇಹ ಶೌಚಾಲಯದಲ್ಲಿ ಪತ್ತೆಯಾದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಪತ್ತನಂತ್ತಿಟ್ಟದ ಮನೋಜ್ (45) ಎಂಬವರ ಶವ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಮಂಜೇಶ್ವರ ಬ್ಲಾಕ್ ಪಂಚಾಯತ್ ಕುಟುಂಬ ಕಲ್ಯಾಣ ಕೇಂದ್ರದ ಆರೋಗ್ಯಾಧಿಕಾರಿ ಆಗಿದ್ದ ಮನೋಜ್ ಅವರು ಮಂಜೇಶ್ವರ ಎಸ್ ಐ ಟಿ ಶಾಲಾ ಸಮೀಪದ ವಸತಿ ಗೃಹದಲ್ಲಿ ವಾಸವಾಗಿದ್ದರು. ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಓರ್ವರೇ ಈ ಕೊಠಡಿಯಲ್ಲಿದ್ದರು ಎನ್ನಲಾಗಿದೆ.































 
 

ಎರಡು ದಿನಗಳ ಹಿಂದೆ ಹೃದಯಘಾತದಿಂದ ಮೃತಪಟ್ಟಿರಹುದು ಎಂದು ಶಂಕಿಸಲಾಗಿದೆ.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಎರಡು ತಿಂಗಳ ಹಿಂದೆ ಮಂಜೇಶ್ವರದಲ್ಲಿ ಅರೋಗ್ಯ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top