ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ಮುಂದುವರಿದಿದ್ದು, ಇಂದು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಮನವಿ ಮಾಡಿಕೊಂಡಿದ್ದಕ್ಕೆ ಪ್ರಜ್ವಲ್ ರೇವಣ್ಣ ತನ್ನ ಅಳಲು ತೋಡಿಕೊಂಡಿದ್ದಾರೆ.
ಕೋರ್ಟ್ ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ರೇವಣ್ಣ ಅವರು ನಾನು ಎರಡು ಕೇಸ್ನಲ್ಲಿ ಒಪ್ಪಿಕೊಂಡು ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಪುರುಷತ್ವ ಪರೀಕ್ಷೆ ತುಂಬಾ ಮುಜುಗರ ಆಗುತ್ತೆ. ಎರಡು ಸಲ ಕೇಳಿದಕ್ಕೆ ನಾನೇ ಮಾಡಿದ್ದೇನೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಕೇಳ್ತಾರೆ. ಈಗಾಗಲೇ ಎರಡು ಕೇಸ್ನಲ್ಲಿ ಪುರುಷತ್ವ ಪರೀಕ್ಷೆ ಆಗಿದೆ ಎಂದು ಜಡ್ಜ್ ಮುಂದೆ ಪ್ರಜ್ವಲ್ ರೇವಣ್ಣ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೋರ್ಟ್ಗೆ ಹಾಜರುಪಡಿಸಿದ ಪೊಲೀಸರು ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೊಂದು ಪ್ರಕರಣದಲ್ಲಿ ಕಸ್ಟಡಿಗೆ ನೀಡಲು ಮನವಿ ಮಾಡಿದರು. ಎಸ್ ಐಟಿ ಪರ ಎಸ್ ಪಿಪಿ ಅಶೋಕ್ ನಾಯಕ್ ಕ್ರೈಂ ನಂಬರ್ 20ರಲ್ಲಿ ಕಸ್ಟಡಿಗೆ ನೀಡಲು ಮನವಿ ಮಾಡಿದರು. ಜಡ್ಜ್ ಮೂರನೇ ಕೇಸ್ನಲ್ಲಿ ಬಾಡಿ ವಾರಂಟ್ ಹಾಕಿದ್ರೆ ತಗೋಬಹುದು. ಅದರಂತೆ ನಾವು ಈಗ ಜೆಸಿ ಕೊಡ್ತೀವಿ. ನಾಳೆ ವಿಸಿ ಮೂಲಕ ಪ್ರೊಡ್ಯೂಸ್ ಮಾಡಿ. ಆನಂತರ ಬಾಡಿ ವಾರಂಟ್ ಮೇಲೆ ಪಡೆಯಬಹುದು ಎಂದು ಸೂಚನೆ ನೀಡಿದ್ದಾರೆ.