ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಮೃತ್ಯು !

ಕಡಬ: ವಿದ್ಯುತ್ ಲೈನ್ ಕಾರ್ಮಿಕನೊಬ್ಬ ಕಂಬದಿಂದ ಬಿದ್ದು ಮೃತಪಟ್ಟ ಘಟನೆ ಪಂಜ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ಇದೀಗ ನಡೆದಿದೆ.

ಅಲೆಕ್ಕಾಡಿ ಸಮೀಪ ಪಿಜಾವು ಎಂಬಲ್ಲಿ ಕಡಬದ ಕೃಷ್ಣ ಎಲೆಕ್ಟ್ರಿಕಲ್ ನ ಕಾರ್ಮಿಕರು ವಿದ್ಯುತ್ ಲೈನ್ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಕಂಬದಿಂದ ಬಿದ್ದು ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ವಿದ್ಯುತ್ ಆಫ್ ಮಾಡಿ ಕೆಲಸ ನಿರ್ವಹಿಸಲಾಗುತ್ತಿದ್ದು ವಿದ್ಯುತ್ ಶಾಕ್ ನಿಂದ ಬಿದ್ದಿರುವುದೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪಂಜ ಶಾಖಾ ಜೆಇ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top