ಪುತ್ತೂರು: ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಜರುಗಿದ ರಾಜ್ಯ ಮಟ್ಟದ ಜೂನಿಯರ್ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ +87 ವಿಭಾಗದಲ್ಲಿ ಭಾಗವಹಿಸಿದ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ.ಜಿ ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಜೂ.18 ರಿಂದ 21 ರ ತನಕ ಮಧ್ಯಪ್ರದೇಶದ ಇಂಧೊರ್ ನಲ್ಲಿ ನಡೆಯಲಿರುವ ’ಅಸ್ಮಿತಾ ಖೇಲೊ ಇಂಡಿಯಾ’ ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಹಾಗೂ ಯತೀಶ್ ಅವರ ಮಾರ್ಗದರ್ಶನದಲ್ಲಿ ಡಾ. ಜ್ಯೋತಿ ತರಬೇತಿ ನೀಡಿರುತ್ತಾರೆ. ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವೃಂದ ಹಾಗೂ ಅಧ್ಯಾಪಕೇತರ ವೃಂದದವರು ಶುಭಹಾರೈಸಿದ್ದಾರೆ. ರಕ್ಷಾ ಬಂಟ್ವಾಳದ ಬರಿಮಾರಿನ ಡೀಕಯ್ಯ ಪೂಜಾರಿ ಹಾಗೂ ಎಸ್. ಲಲಿತಾ ದಂಪತಿ ಪುತ್ರಿ. ಪ್ರಸ್ತುತ ವಿವೇಕಾನಂದ ಪದವಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.