ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೌಡ ಸಮಾಜದ ಬೆಂಗಳೂರು ಘಟಕದ ವತಿಯಿಂದ ಭಾವೀ ವಧು ವರರ ಮುಖಾ ಮುಖಿ ಭೇಟಿ ಕಾರ್ಯಕ್ರಮ ಸಪ್ತಪದಿ 2024 ಲಗ್ಗೆರೆ ‘ನಮ್ಮನೆ’ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಜೂ. 16 ಭಾನುವಾರ ನಡೆಯಿತು.

ಬೆಂಗಳೂರು ಘಟಕ ಗೌಡ ಸಮಾಜದ ಅಧ್ಯಕ್ಷ ಪಾನತ್ತೆಲ ಪಳಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ನಾಗೇಶ್ ಕುಮಾರ್ ಕಲ್ಲುಮುಟ್ಟು, ಕಾರ್ಯದರ್ಶಿ ಸೋಮಣ್ಣ ಕುಂಭಗೌಡನ, ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ಮಡ್ತಿಲ, ಉಪಾಧ್ಯಕ್ಷೆ ನರಿಯನ ಗಂಗಮ್ಮ, ಕಾರ್ಯದರ್ಶಿ ವನಿತಾ ರಾಧಾಕೃಷ್ಣ, ಯುವ ಘಟಕದ ಅಧ್ಯಕ್ಷ ದಯಾನಂದ ಕುಂಡ್ಲಾಡಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸುಮಾರು 200 ಕ್ಕಿಂತಲೂ ಅಧಿಕ ವಧು ವರರು ಸಪ್ತ ಪದಿ ವೇದಿಕೆಯ ಮೂಲಕ ನೋಂದಾವಣೆ ಮಾಡಿಕೊಂಡರು. ಬಳಿಕ ವಧು ವರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.