ಸ್ಮೃತಿ ವನದಲ್ಲಿ 4.6 ಲಕ್ಷ ಗಿಡ ಬೆಳೆಸಿದ ಸುಳ್ಯದ ಡಾ.ಆರ್.ಕೆ.ನಾಯರ್ l ಒಲಿಯಿತು ಯುನೆಸ್ಕೋ ಪ್ರಶಸ್ತಿ

ಮುಂಬೈ : ಗುಜರಾತ್‌ನ ಭುಜ್‌ನಲ್ಲಿ ನಿರ್ಮಿಸಿರುವ ಭೂಕಂಪ ಸ್ಮಾರಕ ಸ್ಮೃತಿ ವನಕ್ಕೆ ಯುನೆಸ್ಕೋ ಪ್ರಶಸ್ತಿ. ಸ್ಮೃತಿ ವನದಲ್ಲಿ 4.60 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ  ಹಸಿರು ಪರಿಸರ ನಿರ್ಮಾಣ ಮಾಡಿರುವ ಸುಳ್ಯದವರಾದ ಪರಿಸರ ತಜ್ಞ ಡಾ. ಆರ್.ಕೆ.ನಾಯರ್ ಅವರಿಗೆ ಇದು ಹೆಮ್ಮೆಯ ಕ್ಷಣ. ಯುನೆಸ್ಕೋ ಪ್ರತಿ ವರ್ಷ ವಾಸ್ತುಶಿಲ್ಪ, ಪ್ರಕೃತಿ ಸಂರಕ್ಷಣೆ ಮತ್ತು ವಿನ್ಯಾಸ ಕ್ಷೇತ್ರದ ವಿಶ್ವದ ಪ್ರತಿಷ್ಠಿತ 7 ಸ್ಥಳಗಳನ್ನು, ಸ್ಮಾರಕಗಳನ್ನು ಗುರುತಿಸಿ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿ ನೀಡಲಾಗುತ್ತದೆ.

 ವಿಶ್ವದ ಏಳು ಅತ್ಯಂತ ಸುಂದರವಾದ ವಸ್ತು ಸಂಗ್ರಹಾಲಯ ಹಾಗೂ ಸ್ಥಳಗಳ ಪಟ್ಟಿಯಲ್ಲಿ ಸ್ಮೃತಿ ವನ ಸ್ಥಾನ ಪಡೆದಿದ್ದು ಪ್ರಶಸ್ತಿಗೆ ಆಯ್ಕೆಯಾಗಿದೆ. ಸ್ಥಳೀಯ ಸಂಸ್ಕೃತಿ ಮತ್ತು ಪ್ರಾಕೃತಿ ಸಂರಕ್ಷಣೆಯ ಅಭಿವ್ಯಕ್ತಿಗಾಗಿ ಭಾರತದ ವಸ್ತು ಸಂಗ್ರಹಾಲಯ ಈ ಜಾಗತಿಕ ಪ್ರಶಸ್ತಿ ಪಡೆದಿದೆ. ಸ್ಮೃತಿ ವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗಿದ್ದಾಗ ಪರಿಕಲ್ಪನೆ ಮಾಡಿದರು ಮತ್ತು ಆಗಸ್ಟ್ 2022 ರಲ್ಲಿ ಉದ್ಘಾಟಿಸಿದ್ದರು. ಪರಿಸರತಜ್ಞ ಡಾ.ಆರ್.ಕೆ.ನಾಯ‌ರ್ ಅವರು ಮಿಯಾವಾಕಿ ಅರಣೀಕರಣ ಯೋಜನೆಯ ಪ್ರಕಾರ ಸ್ಮೃತಿವನದಲ್ಲಿ 4.60ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. 36 ಎಕ್ರೆ ಪ್ರದೇಶದಲ್ಲಿ ಸುಂದರ ಅರಣ್ಯವನ್ನು ನಿರ್ಮಿಸಿದ್ದಾರೆ. 470 ಎಕ್ರೆ ಪ್ರದೇಶದಲ್ಲಿ ಸ್ಮೃತಿ ವನ ನಿರ್ಮಾಣ ಮಾಡುವ ಯೋಜನೆ ರೂಪಿಸಿದ್ದು ಮೊದಲ ಹಂತದಲ್ಲಿ170 ಎಕ್ರೆ ಸ್ಥಳದಲ್ಲಿ ಸ್ಮೃತಿ ವನ ನಿರ್ಮಾಣ ಮಾಡಲಾಗಿದೆ.

ಏಷ್ಯಾದ ಅತೀ ದೊಡ್ಡ ಭೂಕಂಪ ಮ್ಯೂಸಿಯಂ, ಭೂಕಂಪದ ಇತಿಹಾದ ತಿಳಿಸುವ ಡಿಜಿಟಲ್ ಮ್ಯೂಸಿಯಂ, ಸ್ಮಾರಕ ಹಾಗೂ ಅರಣ್ಯ ಬೆಳೆಸಲಾಗಿದೆ. ಸುಳ್ಯ ಜಾಲ್ಸೂರಿನವರಾದ ಡಾ.ಆರ್.ಕೆ.ನಾಯರ್ ಗುಜರಾತ್‌ನ ಉದ್ಯಮಿ ಹಾಗೂ ಪರಿಸರ ತಜ್ಞರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top