ಬಕ್ರೀದ್ ಹಬ್ಬದಂದು ಎಲ್ಲೆಂದರಲ್ಲಿ ನಮಾಜ್ ಮಾಡುವುದು, ಪ್ರಾಣಿಬಲಿ ಕೊಡುವಂತಿಲ್ಲ | ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ

ಲಖನೌ: ಬಕ್ರೀದ್ ಹಬ್ಬದಂದು ಎಲ್ಲೆಂದರಲ್ಲಿ ನಮಾಜ್ ಮಾಡುವುದು, ಪ್ರಾಣಿಬಲಿ ಕೊಡುವುದು ಮಾಡುವಂತಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಮುಸ್ಲಿಂ ಸಮೂಹಕ್ಕೆ ಖಡಕ್ ಸಂದೇಶವೊಂದನ್ನು ನೀಡಿದ್ದು, ಜೂನ್ 17 ರಂದು ದೇಶದ ಎಲ್ಲೆಡೆ ಮುಸ್ಲಿಂ ಸಮೂಹದವರು ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಈ ವೇಳೆ ಅವರು ಎಲ್ಲೆಂದರಲ್ಲಿ ಕುಳಿತು ನಮಾಜ್ ಮಾಡುವುದು ಹಾಗೂ ಪ್ರಾಣಿಗಳನ್ನು ಬಲಿ ಕೊಡುವ ಕೆಲಸ ಮಾಡುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತದೆ. ಹಾಗಾಗಿ ಮುಸ್ಲಿಂರು ರಸ್ತೆಗಳಲ್ಲಿ ನಮಾಜ್ ಮಾಡುವಂತಿಲ್ಲ. ಅದಕ್ಕಾಗಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಮಾತ್ರ ನಮಾಜ್ ಮಾಡಬೇಕು. ಹಾಗೇ ಗೊತ್ತುಪಡಿಸದ ಸ್ಥಳಗಳಲ್ಲಿ ಪ್ರಾಣಿ ಬಲಿ ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ನಿಷೇಧ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಕ್ರೀದ್ ನಲ್ಲಿ ಬಲಿದಾನ ಮಾಡುವ ಸ್ಥಳವನ್ನು ಮೊದಲೇ ಗುರುತಿಸಬೇಕು. ಇತರ ಸ್ಥಳಗಳಲ್ಲಿ ಬಲಿದಾನ ಮಾಡಬಾರದು ಹಾಗೂ ವಿವಾದಿತ ಸ್ಥಳಗಳಲ್ಲಿ ಬಲಿ ನೀಡಬಾರದು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಹಾಗೇ ಬಲಿದಾನದ ನಂತರ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಕ್ರಿಯಾ ಯೋಜನೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು ಎಂದು ಸಿಎಂ ಯೋಗಿ ಅವರು ತಿಳಿಸಿದ್ದಾರೆ.





























 
 

ಈ ದಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಯೋಗಿ ಅವರು ಆಡಳಿತ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮುಂಬರುವ ಹಬ್ಬದ ಸಮಯದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಬಲವಾದ ಹಿಡಿತವನ್ನಿಟ್ಟುಕೊಳ್ಳಬೇಕು. ಹಿಂದೂಗಳು ಜೂನ್ 16ರಂದು ಗಂಗಾ ದಸರವನ್ನು ಆಚರಿಸಿದರೆ, ಮುಸ್ಲಿಂರು ಜೂನ್ 17ಕ್ಕೆ ಬಕ್ರೀದ್ ಅನ್ನು ಆಚರಿಸುತ್ತಾರೆ. ಹಾಗೇ ಜೂನ್ 18ರಂದು ಬಡಾ ಮಂಗಲ್ ಹಬ್ಬವಿದೆ, ಜೂನ್ 21ಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಇದೆ. ಅಲ್ಲದೇ ಜುಲೈ ತಿಂಗಳಿನಲ್ಲಿ 17ಕ್ಕೆ ಮೊಹರಂ, 22ಕ್ಕೆ ಹಿಂದೂಗಳು ಕನ್ನರ್ ಯಾತ್ರೆ ಪ್ರಾರಂಭಿಸುತ್ತಾರೆ. ಹಾಗಾಗಿ ಈ ದಿನ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯ. ಹಾಗಾಗಿ ಸರಕಾರ ಮತ್ತು ಆಡಳಿತ ವರ್ಗದವರು ಪ್ರತಿದಿನ 24 ಗಂಟೆಗಳ ಕಾಲ ಸಕ್ರಿಯವಾಗಿರಬೇಕೆಂದು ಸಿಎಂ ಯೋಗಿ ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top