ಬೆಂಗಳೂರು : ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಚೇದನ ವಿಚಾರದ ಬೆನ್ನಲ್ಲೇ ಇದೀಗ ದುನಿಯಾ ವಿಜಯ್ ಹಾಗೂ ನಾಗರತ್ನ ವಿಚ್ಚೇದನ ಚರ್ಚೆಗೆ ಬಂದಿದ್ದು, ಇಂದು ತೀರ್ಪು ಹೊರಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ದುನಿಯಾ ವಿಜಯ್ ಹಾಗೂ ನಾಗರತ್ನ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ 2018ರಲ್ಲಿ ವಿಜಯ್ ಅವರು ವಿಚ್ಚೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಜಯ್ ರೆಡಿ ಇದ್ದಾರೆ. ಅಷ್ಟೇ ಅಲ್ಲ ಪತ್ನಿಗೆ ಜೀವನಾಂಶ ಕೂಡ ಕೊಡಲು ರೆಡಿ ಇದ್ದಾರೆ. ಆದರೆ ಕೋರ್ಟ್‌ಗೆ ಹೋದಾಗಲೆಲ್ಲ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಲ್ಲ. ಹೀಗಾಗಿ ಪ್ರಕರಣ ಮುಂದೂಡುತ್ತಲೇ ಬರುತ್ತಿದ್ದು, ಇಂದು ಪ್ರಕರಣದ ತೀರ್ಪು ಹೊರ ಬರಲಿದೆ.
ಬೆಂಗಳೂರಿನ ಶಾಂತಿನಗರ ಫ್ಯಾಮಿಲಿ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆದಿದೆ. ವಾದ-ವಿವಾದವನ್ನು ಆಲಿಸಲಾಗಿದೆ. 3 ಘಂಟೆ ನಂತರ ಅರ್ಜಿ ವಿಚಾರಣೆ ನಡೆಯೋ ಸಾಧ್ಯತೆ ಇದೆ ಎನ್ನಲಾಗಿದೆ. ದುನಿಯಾ ವಿಜಯ್ ಅವರು ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಅವರ ಪರ ವಕೀಲರು ಮಾತ್ರ ಕೋರ್ಟ್‌ಗೆ ಹಾಜರಾಗುತ್ತಿದ್ದಾರೆ.