ಕರಾವಳಿ ಜಿಲ್ಲೆಯಾದ್ಯಂತ ಜೂ.14 ರಂದು ತೆರೆ ಕಾಣಲಿದೆ “ತುಡರ್” ತುಳು ಸಿನಿಮಾ | ಪತ್ರಿಕಾಗೋಷ್ಠಿಯಲ್ಲಿ ನಾಯಕ ನಟ ಸಿದ್ಧಾರ್ಥ್

ಪುತ್ತೂರು: ಸುಮುಖ ಪೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾದ “ತುಡರ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಜೂ.14 ರಂದು ತೆರೆ ಕಾಣಲಿದೆ ಎ೦ದು ನಾಯಕ ನಟ ಸಿದ್ಧಾರ್ಥ್ ಎಚ್ ಶೆಟ್ಟಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆ‌ರ್, ಸಿನಿಪೊಲಿಸ್, ಸುರತ್ನಲ್ ನಲ್ಲಿ ಸಿನಿಗ್ಯಾಲಕ್ಕಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್. ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ರಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ ಎ೦ದರು.

ಈಗಾಗಲೇ ತುಡ‌ರ್ ಸಿನಿಮಾ ವಿದೇಶದಲ್ಲಿ ಪ್ರೀಮಿಯ‌ರ್ ಶೋ ಪ್ರದರ್ಶನಗೊಂಡು ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ಧಾರ್ಥ್ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎ೦ದರು.



































 
 

ಸಿನಿಮಾಕ್ಕೆ ವಿಲ್ಸನ್ ರೆಬೆಲ್ಲೊ ಬ೦ಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಸಹ ನಿರ್ಮಾಪಕರಾಗಿ ಹರೀಶ್ ಶೆಟ್ಟಿ ವಿದ್ಯಾ ಸಂಪತ್, ನಿರ್ದೇಶಕರಾಗಿ ತೇಜೇಶ್ ಪೂಜಾರಿ, ಎಲ್ಮನ್ ಮಸ್ಕರೇನಸ್, ಕಥೆ, ಚಿತ್ರ ಕಥೆ, ಸಂಭಾಷಣೆ ಸಾಹಿತ್ಯದಲ್ಲಿ ಮೋಹನ್ ರಾಜ್. ಸಂಗೀತದಲ್ಲಿ ಪ್ಯಾಡ್ಮಿನ್ ಪಿರೇರಾ, ಸಾಯೀಶ್ ಭಾರದ್ಮಾಜ್ ಛಾಯಾಗ್ರಹಣದಲ್ಲಿ ಚಂತೂ ಮೆಪ್ಪಯುರು, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ ನೃತ್ಯ ಸಂಯೋಜಕರಾಗಿ ವಿಜೇತ್ ಆರ್. ನಾಯಕ್, ಸಂಕಲನದಲ್ಲಿ ಗಣೇಶ್ ನೀರ್ಚಾಲ್, ಪ್ರಚಾರ ವಿನ್ಯಾಸದಲ್ಲಿ ದೇವಿ ಸಹಕಾರ ನೀಡಿದ್ದಾರೆ.

ತುಡ‌ರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ ನಾಯಕನಾಗಿ ಸಿದ್ದಾರ್ಥ್ ಎಚ್. ಶೆಟ್ಟಿ ದೀಕ್ಷಾ ಭಿಷೇ, ಅರವಿ೦ದ ಬೋಳಾ‌ರ್, ರೂಪ ವರ್ಕಾಡಿ, ಸದಾಶಿವ ಅಮೀನ್, ನಮಿತಾ ಕೂಳೂರು, ಎಲ್ಮನ್ ಮಶ್ವರೇನ್ಹಸ್, ವಿಕಾಸ್ ಪುತ್ರನ್, ಪುಜ್ವಲ್ ಶೆಟ್ಟಿ ಹರ್ಷಿತಾ ಶೆಟ್ಟಿ ರಾಧೇಶ್ ಶೆಣೈ ಅನ್ನಿತಾ ಸಾಗರ್, ಜಯಶೀಲ, ಉಮೇಶ್ ಮಿಜಾ‌ರ್, ಅಶೋಕ್ ಕುಮಾರ್, ಉದಯ ಪೂಜಾರಿ, ಮೋಹನ್ ರಾಜ್ ಇದ್ದಾರೆ ಎ೦ದರು.

ಪತ್ರಿಕಾಗೋಷ್ಠಿಯಲ್ಲಿ ವಿಲ್ಸನ್ ರೆಬೆಲ್ಲೊ, ವಿದ್ಯಾ ಸಂಪತ್, ಸಿದ್ಧಾರ್ಥ್‍ ಎಚ್‍. ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಸಂಪತ್ ಕರ್ಕೇರಾ, ವಿತರಕ ಬಾಲಕೃಷ್ಣ ಕುಕ್ಕಾಡಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top