ಪುತ್ತೂರಿನ ಪ್ರತಿಷ್ಠಿತ ರೋಟರಿ ಕ್ಲಬ್ ಪೂತ್ತೂರು ಪೂರ್ವದ ಅತ್ಯುತ್ತಮ ಸಮಾಜ ಸೇವೆ | ಪ್ಲಾಟಿನಂ ಪ್ಲಸ್ ಸಹಿತ ಹಲವು ಪ್ರಶಸ್ತಿ ಪಡೆದುಕೊಂಡ ಕ್ಲಬ್

ಪುತ್ತೂರು: ಪ್ರತಿಷ್ಠಿತ ರೋಟರಿ ಕ್ಲಬ್ ಪುತ್ತೂರು ಪೂರ್ವ 2023-24ನೇ ಸಾಲಿನಲ್ಲಿ ಸಲ್ಲಿಸಿದ ಅತ್ಯುತ್ತಮ ಸಮಾಜ ಸೇವೆಗೆ ರೋಟರಿ ಕ್ಲಬ್‌ನ ಅತ್ಯುನ್ನತ ಪ್ರಶಸ್ತಿ ಪ್ಲಾಟಿನಂ ಪ್ಲಸ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ-3181 ವತಿಯಿಂದ ಮೈಸೂರಿನಲ್ಲಿ ನಡೆದ 2023-24ನೇ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಪೂರ್ವದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಪ್ರಶಸ್ತಿ ಸ್ವೀಕರಿಸಿದರು.

ಅತೀ ಹೆಚ್ಚು ಸದಸ್ಯತ್ವ ನೋಂದಾವಣೆಗೆ ಎಕ್ಸಲೆನ್ಸ್ ಪ್ರಶಸ್ತಿ, ಕ್ಲಬ್‌ನ ಶಾಶ್ವತ ಯೋಜನೆಗಳಿಗೆ ಮಹೋನ್ನತ ಕೊಡುಗೆ, ಜಿಲ್ಲಾ ಯೋಜನೆಗಳಿಗೆ, ಟೆಆರ್‌ಎಫ್ ಕೊಡುಗೆಗಳಿಗೆ ಜಿಲ್ಲಾ ರಾಜ್ಯಪಾಲರ ವಿಶಿಷ್ಠ ಪ್ರಶಸ್ತಿ, ಕ್ಲಬ್‌ನ ವಿಸ್ತರಣೆಯ ಅಂಗವಾಗಿ ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್ ಎಂಬ ನೂತನ ಕ್ಲಬ್ ರಚನೆಗೆ ಅಭಿನಂದನಾ ಪತ್ರ ಹಾಗೂ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.





























 
 

ಕ್ಲಬ್ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ, ನಿಯೋಜಿತ ಅಧ್ಯಕ್ಷ ಡಾ. ರವಿಪ್ರಕಾಶ್, ಜಿಲ್ಲಾ ಸಹಾಯಕ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ಪ್ರಮುಖರಾದ ವಿಶ್ವಾಸ್ ಶೆಣೈ, ಸೂರ್ಯನಾಥ ಆಳ್ವ, ಕೇಶವ ನಾಯಕ್, ಶಿವರಾಮ ಆಳ್ವ, ಸುರೇಂದ್ರ ರೈ, ವಸಂತ ಜಾಲಾಡಿ, ಮುರಳೀಶ್ಯಾಂ, ಶಶಿಕರಣ್ ರೈ ನೂಜಿಬೈಲು, ಡಾ.ಶ್ಯಾಮ್ ಪ್ರಸಾದ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top