ಪುತ್ತೂರು : ಮತ್ತೆ ಆನೆಯೊಂದು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ತೋಟವೊಂದರದಲ್ಲಿ ಕಾಣಿಸಿಕೊಂಡಿದೆ.
ಸವಣೂರಿನ ಗೌರಿ ಹೊಳೆ ದಾಟಿ ಬಂದಿದ್ದ ಆನೆ ಸುಳ್ಯ ತಾಲೂಕಿನ ಕೆಲವೆಡೆ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸಿದೆ. ಬಳಿಕ ಆನೆ ಪುತ್ತೂರು ತಾಲೂಕಿನ ಮಾಡಾವು ಸುತ್ತಮುತ್ತಲ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು. ಸೋಮವಾರ ಶಾಂತಿಗೋಡು ಗ್ರಾಮದಲ್ಲಿ ಕಾಣಿಸಿಕೊಂಡು ಮನೆಯೊಂದರ ಗೇಟಿಗೆ ಹಾನಿ ಮಾಡಿ, ಕೃಷಿ ತೋಟಕ್ಕೆ ನುಗ್ಗಿತ್ತು.
ಇದೀಗ ಈ ಆನೆ ಇಂದು ನಸುಕಿನ ಜಾವ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿ ತೋಟದಲ್ಲಿ ಕಂಡು ಬಂದಿದೆ.
ಎಚ್ಚೆತ್ತುಕೊಳ್ಳದ ಇಲಾಖೆ :
ಈ ಭಾಗದಲ್ಲಿ ಆನೆ ಸಂಚಾರದಲ್ಲಿ ತೊಡಗಿ ಒಂದು ವಾರ ಕಳೆದರೂ ಅರಣ್ಯ ಇಲಾಖೆ ಸಹಿತ ಸಂಬಂಧಪಟ್ಟ ಇಲಾಖೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ಆನೆಯನ್ನು ಹಿಡಿದು ಬೇರೆಡೆ ಸಾಗಿಸುವ ಪ್ರಯತ್ನಕ್ಕೆ ಇನ್ನೂ ಚಾಲನೆ ನೀಡಿಲ್ಲ. ಜೀವಹಾನಿ ಆಗುವ ಮೊದಲು ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದರೆ.