ಪುತ್ತೂರು: ಇಂದು ಮುಂಜಾನೆ ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರದ ಬಾರ್ತೋಲಿ ಎಂಬಲ್ಲಿಗೆ ಆನೆ ಲಗ್ಗೆಯಿಟ್ಟಿದ್ದು, ಎರಡು ಆನೆಗಳು ಇರುವ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸಂಜೀವ ಮಠಂದೂರು, ಈಗಾಗಲೇ ಆನೆ ದಾಳಿಯಿಂದ ಕೃಷಿಗೆ ಹಾನಿಯಾಗಿದ್ದು, ಅಂತವರಿಗೆ ಸರಕಾರದಿಂದ ಪರಿಹಾರ ನೀಡುವ ಕೆಲಸ ಆಗಬೇಕು. ಏನು ನಗರ ಪ್ರದೇಶಕ್ಕೆ ಆನೆಗಳು ಬರುವ ಜಾಗದಲ್ಲಿ ಆನೆ ಕಂದಕಗಳನ್ನು ನಿರ್ಮಾಣ ಮಾಡಬೇಕು. ಜತೆಗೆ ಈಗಾಗಲೇ ಲಗ್ಗೆಯಿಟ್ಟ ಆನೆಗಳನ್ನು ಹಿಡಿದು ಕಾಡಿಗೆ ಅಟ್ಟುವ ಕೆಲಸ ಶೀಘ್ರ ಆಗಬೇಕಾಗಿದೆ ಎಂದ ಅವರು, ಸಾರ್ವಜನಿಕರು ಅತ್ತಿಂದಿತ್ತ ಓಡಾಡುವಾಗ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ.