ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಆನೆ ಅಶ್ವತ್ಥಾಮ ಇನ್ನಿಲ್ಲ

ಮೈಸೂರು : ಮೈಸೂರು ದಸರಾ ಮಹೋತ್ಸವದಲ್ಲಿ ಎರಡು ಬಾರಿ ಪಾಲ್ಗೊಂಡಿದ್ದ ಅಶ್ವತ್ಥಾಮ ಮೃತಪಟ್ಟಿರೋದಾಗಿ ತಿಳಿದು  ಬಂದಿದೆ .

ಮೈಸೂರು ದಸರಾದಲ್ಲಿ ಎರಡು ಬಾರಿ ಪಾಲ್ಗೊಂಡು ಅಂಬಾರಿ ಹೊತ್ತ ಆನೆಗೆ ಸಾಥ್ ನೀಡಿದ್ದಂತ ಅಶ್ವತ್ಥಾಮ ಆನೆಯನ್ನು ಹುಣಸೂರು- ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ನಾಗರಹೊಳೆಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಇರಿಸಲಾಗಿತ್ತು ಎಂದಿದ್ದಾರೆ.

ಭೀಮನಕಟ್ಟೆಯ ಆನೆ ಶಿಬಿರದಲ್ಲಿದ್ದಂತ ಮೈಸೂರು ದಸರಾ ಆನೆ ಅಶ್ವತ್ಥಾಮ, ಆಹಾರ ಅರಸಿ ಕಾಡಿಗೆ ತೆರಳಿತ್ತು. ಈ ವೇಳೆಯಲ್ಲಿ ಸೋಲಾರ್ ಬೇಲಿಯಿಂದ ವಿದ್ಯುತ್‌ ಸ್ಪರ್ಶಿಸಿ, ವಿದ್ಯುತ್ ಆಘಾತದಲ್ಲಿ ಅಶ್ವತ್ಥಾಮ ಆನೆ ಮೃತಪಟ್ಟಿರೋದಾಗಿ ತಿಳಿದು ಬಂದಿದೆ.ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿರುವಂತ ಅಶ್ವತ್ಥಾಮ ಆನೆಯು, ಎರಡು ಬಾರಿ ದಸರಾ ಮಹೋತ್ಸವಲ್ಲಿ ಪಾಲ್ಗೊಂಡಿದ್ದಂತ ಆನೆಯಾಗಿದೆ. ಅದಕ್ಕೆ 38 ವರ್ಷ ವಯಸ್ಸಾಗಿತ್ತು ಎಂಬುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top