ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 110ನೇ ಸರಣಿಯಲ್ಲಿ ಪದವರ್ಣಗಳ ಪ್ರಸ್ತುತಿ ‘ವರ್ಣಿಕ’ ಬಹಳ ವಿಶೇಷವಾಗಿತ್ತು.
ಕಲಾವಿದೆಯರಾದ ಅಂಕಿತಾ ಪ್ರಜ್ವಲ್ ಮತ್ತು ವಿಂಧ್ಯಾ ಕಾರಂತರು ಪದವರ್ಣಗಳನ್ನು ಪ್ರಸ್ತುತಪಡಿಸಿದರು. ಪುತ್ತೂರಿನ ‘ದಿ ವೆಬ್ ಪೀಪಲ್’ ಕಂಪೆನಿಯ ಆದಿತ್ಯ ಕಲ್ಲೂರಾಯ ಅಭ್ಯಾಗತರಾಗಿ ಶುಭ ಹಾರೈಸಿದರು.
ಹಿಮ್ಮೇಳದ ನಟುವಾಂಗದಲ್ಲಿ ಗುರು ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಶ್ಯಾಮ ಭಟ್ ಮತ್ತು ಕೊಳಲಿನಲ್ಲಿ ಕೃಷ್ಣಗೋಪಾಲ್ ಸಹಕರಿಸಿದ್ದರು.